ಬದುಕು ಸೆಂಟರ್ ಫಾರ್ ಲೈವ್ಲಿವುಡ್ಸ್ ಲರ್ನಿಂಗ್, ಸಂವಾದ ಮತ್ತು ಬದುಕು ಅಲುಮ್ನಿ ಸಹಯೋಗದೊಂದಿಗೆ ಮಾರ್ಚ್ 23ರ ಬೆಳಿಗ್ಗೆ 10ಕ್ಕೆ ಬೆಂಗಳೂರಿನ ಕುಮಾರ ಕೃಪಾ ರಸ್ತೆಯ ಗಾಂಧಿ ಭವನದಲ್ಲಿ ‘ಸುಗ್ಗಿ ಸಂಭ್ರಮ-2025’ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಬದುಕು ಸೆಂಟರ್ ಫಾರ್ ಲೈವ್ಲಿವುಡ್ಸ್ ಲರ್ನಿಂಗ್ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸುಸ್ಥಿರ ಬದುಕಿಗೆ ಅಗತ್ಯವಾದ ಪರಿಸರಸ್ನೇಹಿ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ನಡೆಸಲಿದ್ದಾರೆ. ‘ಅಡವಿ’ ಕಲಾತಂಡದಿಂದ ‘ಪರೈ ಆಟ್ಟಮ್’ ಪ್ರದರ್ಶನ ಇರಲಿದೆ.
ಮಂಡ್ಯದ ‘ಜನೋದಯ’ ಪತ್ರಿಕೆಯ ಸಂಪಾದಕಿ, ಲೇಖಕಿ ಮಂಜುಳಾ ಕಿರುಗಾವಲು, ‘ಇಕೋ ಧಾಗ’ ಸಂಸ್ಥೆಯ ಸಂಸ್ಥಾಪಕಿ ಸಂಜನಾ ಸ್ವರೂಪ್ ಮತ್ತು ಸಾವಯವ ಕೃಷಿಕ ಸೈಯದ್ ಘನಿ ಖಾನ್ ಈ ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

‘ಸಂವಾದ’ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಜನಾರ್ಧನ ಮತ್ತು ಡಾ. ಸವಿತಾ ಸುರೇಶ್ ಬಾಬು, ಬದುಕು ಸೆಂಟರ್ ಫಾರ್ ಲೈವ್ಲಿಹುಡ್ ಲರ್ನಿಂಗ್ ನಿರ್ದೇಶಕ ಮುರಳಿ ಮೋಹನ್ ಕಾಟಿ ಅವರು ಉಪಸ್ಥಿತಿ ಇರಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಇಂದಿನ ಮಕ್ಕಳಿಗೆ ವಚನಗಳು ದಾರಿದೀಪ: ಶಾಲಿನಿ ಮಾಣಿಕ್
ಬದುಕಿನ ಬಗ್ಗೆ: ಬದುಕು ಸೆಂಟರ್ ಫಾರ್ ಲೈವ್ಲಿವುಡ್ಸ್ ಲರ್ನಿಂಗ್ ಕಳೆದ ಹದಿನಾಲ್ಕು ವರ್ಷಗಳಿಂದ ಗುಣಮಟ್ಟದ ಮಾಧ್ಯಮ ಶಿಕ್ಷಣವನ್ನು ನೀಡುತ್ತಿದೆ. ಅವಕಾಶ ವಂಚಿತ ಗ್ರಾಮೀಣ, ಅಂಚಿನ ಸಮುದಾಯಗಳ ಯುವಜನರಿಗೆ ಶಿಕ್ಷಣ ನೀಡುವುದು ಮತ್ತು ಆ ಮೂಲಕ ಅವರ ಸಾಮಾಜಿಕ ಚಲನೆಯಲ್ಲಿ ಭಾಗಿಯಾಗುವುದು ಬದುಕು ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್‌ನ ಮುಖ್ಯ ಗುರಿಯಾಗಿದೆ.

ಸುಸ್ಥಿರ ಬದುಕಿಗೆ ಅಗತ್ಯವಾದ ಪರಿಸರಸ್ನೇಹಿ ವಸ್ತುಗಳ ಪ್ರದರ್ಶನ, ಮಾರಾಟ ‘ಸುಗ್ಗಿ ಸಂಭ್ರಮ’ ಕಾರ್ಯಕ್ರಮದಲ್ಲಿ ನಡೆಯುತ್ತಿದೆ. ಯುವಜನರ ಈ ಹೊಸ ಉದ್ಯಮಶೀಲತೆಯನ್ನು ಬೆಂಬಲಿಸಲು ಬನ್ನಿ, ಕೊಂಡು ಪ್ರೋತ್ಸಾಹಿಸಿ.
