ಬೆಂಗಳೂರು | ಬಂಜಾರ ಸಂಸ್ಕೃತಿಯ ಅನನ್ಯತೆ ಮೇಲೆ ಬೆಳಕು ಚೆಲ್ಲಬೇಕು: ಡಾ. ಸಣ್ಣರಾಮ

Date:

Advertisements

ಜನಪದ ವಿದ್ವಾಂಸರ ಪ್ರಕಾರ ಶ್ರೇಷ್ಠ, ಕನಿಷ್ಠ ಸಂಸ್ಕೃತಿ ಎಂಬುವುದಿಲ್ಲ. ಬಂಜಾರ ಸಂಸ್ಕೃತಿ ಮತ್ತು ಚಾರಿತ್ರಿಕ ಅಂಶಗಳ ಮೇಲೆ ಬೆಳಕು ಚೆಲ್ಲಬೇಕು. ಜಾನಪದ ಮತ್ತು ಮೌಖಿಕ ಪರಂಪರೆಯ ಪ್ರಕಾರ ಬಂಜಾರರ ಮೂಲ ಪುರುಷ ದಾದಾ ಮೌಲ ತ್ರೇತಾಯುಗದಲ್ಲಿ ಶ್ರೀ ಕೃಷ್ಣನ ಗೋವುಗಳನ್ನು ಪಾಲನೆ ಮಾಡುತ್ತಿದ್ದರೆಂದು ಉಲ್ಲೇಖಿಸುತ್ತ ಬಂಜಾರರ ಪರಂಪರೆ ಕ್ರಿ.ಪೂ.10 ನೇ ಶತಮಾನದಲ್ಲಿ ಅಸ್ತಿತ್ವದಲ್ಲಿತ್ತು ಎಂದು ಡಾ. ಸಣ್ಣರಾಮ ಹೇಳಿದರು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯಿಂದ ಅಕ್ಟೋಬರ್‌ 14ರಂದು ಹಮ್ಮಿಕೊಂಡಿದ್ದ ಕಳತಾವೂರ್‌ ಮಳಾವ್‌ -02, ಸಜ್ಜನರ ಸಲ್ಲಾಪ -02, ಮೀನಾರೋ ಪಾಮಣೋ-ತಿಂಗಳ ಅಥಿತಿ ಸಮಾರಂಭದಲ್ಲಿ ಇಂದಿನ ತಿಂಗಳ ಅತಿಥಿಯಾಗಿ ಮಾತನಾಡಿದರು.

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷ ಡಾ. ಎ ಆರ್ ಗೋವಿಂದಸ್ವಾಮಿ ಮಾತನಾಡಿ, “ಅಕಾಡೆಮಿಯು ಅತ್ಯಂತ ಕಡಿಮೆ ಅನುದಾನ ಹೊಂದಿದ್ದರೂ ನಿರಂತರವಾಗಿ ಸಂಸ್ಕೃತಿ ಮತ್ತು ಭಾಷೆಯ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದು, ಭಾರತದಲ್ಲಿನ ಸುಮಾರು 463 ಸಣ್ಣ ಮತ್ತು ಅತಿಸಣ್ಣ ಸಮುದಾಯಗಳಲ್ಲಿ ಬಂಜಾರರ ಕಲೆ ಸಂಸ್ಕೃತಿ ವೇಷಭೂಷಣಗಳ ಕೊಡುಗೆಯನ್ನು ನೀಡಿದ್ದಾರೆ‌. ಸಜ್ಜನರ ಸಲ್ಲಾಪ ಕಾರ್ಯಕ್ರಮವು ಬಂಜಾರರ ಮುಂದಿನ ಪೀಳಿಗೆಗೆ ಆದರ್ಶಪ್ರಾಯ. ಈ ಹಿನ್ನಲೆಯಲ್ಲಿ ಮೊದಲ ಅತಿಥಿಯಾಗಿ ನಾಡೋಜ ಹಂಪ ನಾಗರಾಜಯ್ಯ ಹಾಗೂ ಎರಡನೇ ಅತಿಥಿಯಾಗಿ ಡಾ. ಸಣ್ಣರಾಮರನ್ನು ಆಹ್ವಾನಿಸಿ ಅವರ ಬದುಕು ಬರಹ ಮತ್ತು ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ನೀಡಬೇಕಾಗಿದೆ” ಎಂದು ಹೇಳಿದರು.

Advertisements

ಈ ಸುದ್ದಿ ಓದಿದ್ದೀರಾ? ತುಮಕೂರು ಜಿಲ್ಲೆಯ ವಿವಿಧ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ : ವಿ.ಸೋಮಣ್ಣ

ಬೆಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಸೂರಪ್ಪ ನಾಯಕ ಮಾತನಾಡಿ, “ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯನ್ನು ಬೀದರ್‌ನಿಂದ ಚಾಮರಾಜನಗರದವರೆಗೆ ಪರಿಚಯಿಸುವಲ್ಲಿ ಅದ್ಯಕ್ಷ ಡಾ. ಎ ಆರ್ ಗೋವಿಂದಸ್ವಾಮಿ ಕೊಡುಗೆ ಅಪಾರ. ಹಾಗೆಯೇ ಬಂಜಾರರ ಇತಿಹಾಸವು ಬೌದ್ಧ ಧರ್ಮದ ಕಾಲದಲ್ಲಿ ಒಂದು ವ್ಯಾಪಾರಿ ಸಮುದಾಯ. ಬೌದ್ಧ ಧರ್ಮದ ಜನರಿಗೆ ದವಸ ಧಾನ್ಯಗಳನ್ನು ಲಕ್ಷಾಂತರ ಎತ್ತುಗಳ ಮೇಲೆ ಸಾಗಿಸುತ್ತಿದ್ದರು” ಎಂದರು.

ಸರಂಗಿ ಉಮಾ ನಾಯಕ್‌, ನಾಗರಾಜ ನಾಯ್ಕ್‌ ಸೇರಿದಂತೆ ಮುಂತಾದವರು ಕಾರ್ಯಕ್ರಮದಲ್ಲಿ ಇದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X