ಬೆಂಗಳೂರು | ವಿಶ್ವಕಪ್ ಪಂದ್ಯಗಳ ಟಿಕೆಟ್ ಮಾರಾಟ ಆರಂಭ; ಕಚೇರಿಗೆ ರಜೆ ಹಾಕಿ ಸರತಿ ಸಾಲಿನಲ್ಲಿ ನಿಂತ ಜನ

Date:

Advertisements

ರಾಜ್ಯ ರಾಜಧಾನಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಕದಿನ ವಿಶ್ವಕಪ್‌ನ 5 ಪಂದ್ಯಗಳು ನಡೆಯಲಿವೆ. ಈ ಪೈಕಿ ನಾಲ್ಕು ಪಂದ್ಯಗಳಿಗೆ ಅ.19ರವರೆಗೆ ಟಿಕೆಟ್ ಮಾರಾಟ ಇರಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುವ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಜೋಷ್ ಹ್ಯಾಜಲ್‌ವುಡ್ ಅವರು ಈ ವಿಶ್ವಕಪ್ ಟೂರ್ನಿಯಲ್ಲಿ ಆಡಲಿದ್ದು, ಇದು ಪಂದ್ಯ ವೀಕ್ಷಣೆಗೆ ಬೆಂಗಳೂರಿಗರ ವಿಶೇಷ ಆಕರ್ಷಣೆಯಾಗಿದೆ.

ಸದ್ಯ ಆಸ್ಟ್ರೇಲಿಯಾ–ಪಾಕಿಸ್ತಾನ (ಅ.20), ಇಂಗ್ಲೆಂಡ್–ಶ್ರೀಲಂಕಾ (ಅ.26), ನ್ಯೂಜಿಲೆಂಡ್–ಪಾಕಿಸ್ತಾನ (ನ.4) ಹಾಗೂ ನ್ಯೂಜಿಲೆಂಡ್–ಶ್ರೀಲಂಕಾ(ನ.9) ಪಂದ್ಯಗಳ ಟಿಕೆಟ್ ಮಾರಾಟ ಆರಂಭವಾಗಿದೆ. ಇನ್ನು ಭಾರತ–ನೆದರ್ಲೆಂಡ್ಸ್‌ (ನ.12) ಪಂದ್ಯದ ಟಿಕೆಟ್‌ಗಳ ಮಾರಾಟ ಆರಂಭವಾಗಿಲ್ಲ.

ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಆಸ್ಟ್ರೇಲಿಯಾ-ಪಾಕಿಸ್ತಾನ ಪಂದ್ಯ ಅ.20ರಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಹಿನ್ನೆಲೆ, ಮಂಗಳವಾರದಿಂದ ಕ್ರಿಕೆಟ್‌ ಪ್ರೇಮಿಗಳಿಗಾಗಿ ಟಿಕೆಟ್‌ ಮಾರಾಟ ಆರಂಭವಾಗಿತ್ತು. ಹಲವು ಜನ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿ ಮಾಡಲು ಮುಂದಾಗಿದ್ದರು.

Advertisements

ಈಗಾಗಲೇ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಬುಧವಾರ ಮತ್ತು ಗುರುವಾರ ಕ್ರೀಡಾಂಗಣದ ಗೇಟ್ ಸಂಖ್ಯೆ 2 ಮತ್ತು 4 (ಕಬ್ಬನ್ ರಸ್ತೆ) ಹಾಗೂ ಗೇಟ್ ಸಂಖ್ಯೆ 16, 18ರಲ್ಲಿ (ಕ್ವೀನ್ಸ್ ರಸ್ತೆ) ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಟಿಕೆಟ್ ಖರೀದಿಗೆ ಅವಕಾಶವಿರಲಿದೆ.

ಸೀಮಿತ ಸಂಖ್ಯೆಯ ಟಿಕೆಟ್‌ಗಳು ಮಾತ್ರ ಲಭ್ಯವಿರಲಿದ್ದು, ಒಬ್ಬರಿಗೆ ಗರಿಷ್ಠ 2 ಟಿಕೆಟ್ ಮಾತ್ರ ನೀಡಲಾಗುತ್ತಿದೆ. ಕನಿಷ್ಠ ₹750 ರಿಂದ ಗರಿಷ್ಠ ₹25 ಸಾವಿರದವರೆಗೆ ಟಿಕೆಟ್ ದರ ನಿಗದಿಯಾಗಿದೆ.

ಮಂಗಳವಾರದಿಂದ ನಾಲ್ಕು ಪಂದ್ಯಗಳಿಗೆ ಟಿಕೆಟ್‌ ಮಾರಾಟ ಆರಂಭವಾದ ಹಿನ್ನೆಲೆ, ಹಲವು ಜನ ರಜೆ ಹಾಕಿ ಟಿಕೆಟ್ ಖರೀದಿಗೆ ಬಂದಿದ್ದರು. ಸರತಿ ಸಾಲಿನಲ್ಲಿ ನಿಂತು ಜನ ಟಿಕೆಟ್ ಖರೀದಿ ಮಾಡುತ್ತಿದ್ದರು. ಇದೇ ವೇಳೆ, ಸರ್ವರ್ ನಿಧಾನಗತಿಯಲ್ಲಿ ಇದ್ದ ಕಾರಣ ಜನರು ಸಾಲಿನಲ್ಲಿ ನಿಂತು ಬಹಳ ಹೊತ್ತು ಕಾಯಬೇಕಾಯಿತು. ಇನ್ನು ಕಡಿಮೆ ಮೊತ್ತದ ಟಿಕೆಟ್‌ಗಳು ಬಹು ಬೇಗನೆ ಖಾಲಿಯಾದವು. ಹಾಗಾಗಿ, ಹಲವು ಅಭಿಮಾನಿಗಳು ಬರಿಗೈಯಲ್ಲಿ ವಾಪಸ್ ಮರಳಬೇಕಾಯಿತು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೋರಮಂಗಲದ ಪಬ್‌ವೊಂದರಲ್ಲಿ ಬೆಂಕಿ ಅವಘಡ

ನವೆಂಬರ್ 12ರಂದು ನಡೆಯಲಿರುವ ಭಾರತ ಮತ್ತು ನೆದರ್ಲೆಂಡ್ಸ್ ನಡುವಣ ಪಂದ್ಯದ ಟಿಕೆಟ್‌ ಮಾರಾಟವಾಗುತ್ತಿದೆಯೆಂಬ ವದಂತಿ ನಂಬಿ ಹಲವು ಜನ ಕಚೇರಿಗಳಿಗೆ ರಜೆ ಹಾಕಿ ಟಿಕೆಟ್ ಖರೀದಿ ಮಾಡಲು ಬಂದಿದ್ದರು. ಈ ವೇಳೆ, ಭಾರತ-ನೆದರ್ಲೆಂಡ್ಸ್ ಪಂದ್ಯ ಟಿಕೆಟ್ ನೀಡುವ ಪ್ರಕ್ರಿಯೆ ಇನ್ನು ಆರಂಭವಾಗಿಲ್ಲ ಎಂಬುದನ್ನು ಅರಿತು ಪೆಚ್ಚು ಮೊರೆ ಹಾಕಿ ಮನೆ ಕಡೆ ನಡೆದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

Download Eedina App Android / iOS

X