ಬೆಂಗಳೂರು | ಮೈದಾನದೊಳಗೆ ನುಗ್ಗಿ ಕೊಹ್ಲಿ ಕಾಲಿಗೆ ಬಿದ್ದ ಅಭಿಮಾನಿ ಯಾರು? ದೂರು ದಾಖಲು

Date:

Advertisements

ರಾಜ್ಯ ರಾಜಧಾನಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಮವಾರ ಆರ್‌ಸಿಬಿ ಮತ್ತು ಪಂಬಾಬ್‌ ಕಿಂಗ್ಸ್‌ ನಡುವೆ ಐಪಿಎಲ್‌ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ ಗೆದ್ದು ಬಿಗಿದ್ದು, ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಪಂದ್ಯ ನಡೆಯುವ ವೇಳೆ, ಅಭಿಮಾನಿಯೊಬ್ಬ ಮೈದಾನದೊಳಕ್ಕೆ ನುಗ್ಗಿ ಕೊಹ್ಲಿ ಕಾಲಿಗೆ ಬಿದಿದ್ದಾನೆ. ಇದು ಭದ್ರತಾ ಲೋಪವಾಗಿದೆ. ಸದ್ಯ ಅಭಿಮಾನಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರೋಚಕ ಐಪಿಎಲ್ ಪಂದ್ಯ ನಡೆಯುತ್ತಿತ್ತು. ವಿರಾಟ್ ಕೊಹ್ಲಿ ಬ್ಯಾಟಿಂಗ್ ಬರುತ್ತಿದ್ದಂತೆ ಅಭಿಮಾನಿಯೊಬ್ಬ ಹೈ ಸೆಕ್ಯೂರಿಟಿ ಮಧ್ಯೆಯೂ ಕ್ರೀಸ್ ಒಳಗಡೆ ನುಗ್ಗಿ ಕೊಹ್ಲಿ ಕಾಲು ಹಿಡಿದು ಹುಚ್ಚಾಟ ನಡೆಸಿದ್ದಾನೆ. ತಕ್ಷಣ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ವಶಕ್ಕೆ ಪಡೆದಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪಂದ್ಯ ನಡೆಯುವ ವೇಳೆ, ಮೈದಾನಕ್ಕೆ ನುಗ್ಗಿದ ವ್ಯಕ್ತಿ ಯಾರು? ಆತನ ಉದ್ದೇಶ ಏನು? ಎಂದು ಸೇರಿದಂತೆ ಪೊಲೀಸರು ಸಾಕಷ್ಟು ವಿವರ ಕಲೆ ಹಾಕುತ್ತಿದ್ದಾರೆ.

Advertisements

ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಕಾಲು ಹಿಡಿದ ಅಭಿಮಾನಿ ವಿಚಾರಣೆ ನಡೆಸಲಾಗಿದೆ. ಈತ ಮೂಲತಃ ರಾಯಚೂರಿನವನಾಗಿದ್ದು, ಅಪ್ರಾಪ್ತ ಯುವಕ ಎಂದು ತಿಳಿದುಬಂದಿದೆ. ಪಂದ್ಯ ವೀಕ್ಷಣೆ ಮಾಡಲು ಈತ ರೈಲಿನಲ್ಲಿ ರಾಯಚೂರಿನಿಂದ ಬೆಂಗಳೂರಿಗೆ ಬಂದಿದ್ದನು.

ಈ ಸುದ್ದಿ ಓದಿದ್ದೀರಾ? ಐಪಿಎಲ್ | ‘ಮ್ಯಾಚ್ ವಿನ್ನರ್’ ಆದ ದಿನೇಶ್ ಕಾರ್ತಿಕ್: ಆರ್‌ಸಿಬಿಗೆ ರೋಚಕ ಜಯ

17 ವರ್ಷದ ಅಪ್ರಾಪ್ತ ₹3,000 ನೀಡಿ ‘ಡಿ ಬ್ಲಾಕ್’ ಟಿಕೆಟ್ ಖರೀದಿ ಮಾಡಿದ್ದನು. ಆತ ವಿರಾಟ್ ಕೊಹ್ಲಿಯ ಹುಚ್ಚು ಅಭಿಮಾನಿಯಾಗಿದ್ದಾನೆ. ವಿರಾಟ್ ಕೊಹ್ಲಿಯನ್ನು ಹಿಡಿದುಕೋ ಎಂದು ಹಿಂದೆ ಕುಳಿತವರು ಕೂಗುತ್ತಿದ್ದರು. ಈ ವೇಳೆ ಗ್ರಿಲ್ ಹಾರಿ ಮೈದಾನದ ಒಳಗೆ ನುಗ್ಗಿದ್ದಾಗಿ ಅಪ್ರಾಪ್ತ ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಹೇಳಿದ್ದಾನೆ ಎನ್ನಲಾಗಿದೆ.

ಮೈದಾನಕ್ಕೆ ಅತಿಕ್ರಮ ಪ್ರವೇಶ, ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ತಂಡ 4 ವಿಕೆಟ್​ಗಳಿಂದ ಗೆದ್ದುಕೊಂಡಿದೆ. ಇದರೊಂದಿಗೆ ಐಪಿಎಲ್‌ ಟೂರ್ನಿಯಲ್ಲಿ 2 ಪಂದ್ಯಗಳನ್ನಾಡಿರುವ ಆರ್​ಸಿಬಿ ಒಂದರಲ್ಲಿ ಸೋಲನುಭವಿಸಿದ್ದು, ಇನ್ನೊಂದರಲ್ಲಿ ಗೆಲುವು ಸಾಧಿಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಂಡಿ | ಬಿಜೆಪಿ ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಅಭಿಯಾನ; ತನಿಖೆಗೆ ಒತ್ತಾಯ

ವಿಜಯಪುರ ಜಿಲ್ಲೆ ಇಂಡಿ ತಾಲೂಕು ಯುವ ಕಾಂಗ್ರೆಸ್ ವತಿಯಿಂದ ಪಟ್ಟಣದ ಬಸವೇಶ್ವರ...

ರಾಯಚೂರು | ನಗರದ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಅಡಿಗಲ್ಲು

ರಾಯಚೂರು ನಗರದ ವಾರ್ಡ್ ನಂ.34ರ ಬಂದೇನವಾಜ ಕಾಲೋನಿ, ದೇವರಾಜ ಅರಸ್ ಕಾಲೋನಿ,...

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

Download Eedina App Android / iOS

X