ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ಮಂಡನಹಳ್ಳಿ ಕೆರೆಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಮೃತ ಮಹಿಳೆಯನ್ನು ನೊಸೇನೂರು ಗ್ರಾಮದ ಕಾಂತಮ್ಮ(35) ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದಿಂದ ಮನನೊಂದಿದ್ದ ಈಕೆ ಮನೆ ತೊರೆದು ತನ್ನ ತಾಯಿ ಮನೆ ಸೇರಿದ್ದರು. ಇತ್ತೀಚಿಗೆ ಕಾಂತಮ್ಮ ಅವರ ತಾಯಿಯೂ ಮೃತಪಟ್ಟಿದ್ದರು. ಒಂಟಿಯಾಗಿದ್ದ ಕಾಂತಮ್ಮ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಕೊಡಗು | ಕಟ್ಟೆಮಾಡು ಗ್ರಾಮದಲ್ಲಿ ಜ.2ರವರೆಗೆ ಸೆಕ್ಷನ್ 163 ಜಾರಿ
ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.
