ಬಂಟ್ವಾಳ ತಾಲೂಕಿನ ಅನುಗ್ರಹ ಮಹಿಳಾ ಪದವಿ ಕಾಲೇಜು, ಕಲ್ಲಡ್ಕದಲ್ಲಿ ಐಕ್ಯೂಎಸಿ ಮತ್ತು ಕಾಮರ್ಸ್ ಅಸೋಸಿಯೇಷನ್ ವತಿಯಿಂದ ಪದವಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗಾಗಿ ‘ವ್ಯಾಪಾರ ವ್ಯವಹಾರದ ಮೂಲಕ ಮಹಿಳಾ ಸಬಲೀಕರಣ’ ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ನಡೆಸಲಾಯಿತು.
ಕಾರ್ಯಾಗಾರಕ್ಕೆ ಸಂಪನ್ಮೂಲ ಅತಿಥಿಗಳಾಗಿ ಮಂಗಳೂರಿನ ಉದ್ಯಮಿ ಗೋಲ್ಡ್ ಸೂಕ್ ಇದರ ಪಾಲುದಾರ ಹಾಗೂ ರಿಫಾ ಚೇಂಬರ್ ಆಫ್ ಕಾಮರ್ಸ್‌ನ ದಕ್ಷಿಣ ಕನ್ನಡ ಜಿಲ್ಲೆಯ ಉಪಾಧ್ಯಕ್ಷ ಜನಾಬ್ ಆಸಿಫ್ ಇಕ್ಬಾಲ್ ಮತ್ತು ಮಂಗಳೂರಿನ ಯುವ ಉದ್ಯಮಿ, ಸ್ಟಾಕ್ ಮಾರ್ಕೆಟ್ ಮತ್ತು ಮ್ಯೂಚುವಲ್ ಫಂಡ್ ವ್ಯರಹಾರಗಳ ಪರಿಣಿತ ಜನಾಬ್ ಸಲಹುದ್ದೀನ್ ಆಗಮಿಸಿದ್ದರು.
ವಿದ್ಯಾರ್ಥಿ ಜೀವನದಲ್ಲಿಯೇ ಉಳಿತಾಯ ಮತ್ತು ಸಣ್ಣ ಮಟ್ಟಿನ ವ್ಯಾಪಾರ ಮತ್ತು ವ್ಯವಹಾರಗಳನ್ನು ಮಾಡಲು ಹೇಗೆ ಸಾಧ್ಯವಿದೆ ಮತ್ತು ಅದಕ್ಕೆ ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡುವುದರೊಂದಿಗೆ ವಿದ್ಯಾರ್ಥಿಗಳ ಜೊತೆಗೆ ನಡೆಸಿದ ಸಂವಾದದಲ್ಲಿ ಅವರ ಪ್ರಶ್ನೆ ಮತ್ತು ಸಂಶಯಗಳಿಗೆ ಪರಿಹಾರಗಳನ್ನು ಅವರು ಸೂಚಿಸಿದರು.

ಇದನ್ನೂ ಓದಿ: ಬಂಟ್ವಾಳ | ಖಾಸಗಿ ಬಸ್‌ಗಳದ್ದೇ ಕಾರುಬಾರು: ವಿಟ್ಲದಲ್ಲಿ ಮರೀಚಿಕೆಯಾಗಿಯೇ ಉಳಿದ ಸರ್ಕಾರಿ ಬಸ್ ಸೇವೆ!
ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಕ್ಷ ಜನಾಬ್ ಯಾಸೀನ್ ಬೇಗ್, ಖಜಾಂಜಿ ಹೈದರ್ ಅಲಿ, ಪ್ರಾಂಶುಪಾಲೆ ಡಾ. ಹೇಮಲತಾ, ವಾಣಿಜ್ಯ ಸಂಘದ ಕಾರ್ಯದರ್ಶಿ ಅಫ್ನ, ಆಕಿಫಾ ಕರೀದ ಕಿರಾತ್, ಸುರಯ್ಯ, ಮಶೀದ ಸೇರಿ ಪದವಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಭಾಗವಹಿಸಿದ್ದರು.
