ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಕೋಮು ದ್ವೇಷಕ್ಕೆ ಬಲಿಯಾದ ಅಬ್ದುಲ್ ರಹ್ಮಾನ್ ಮನೆಗೆ ಕರ್ನಾಟಕ ವಕ್ಫ್ ಕೌನ್ಸಿಲ್ ಇದರ ಉಪಾಧ್ಯಕ್ಷರಾದ ಮೌಲಾನಾ ಶಾಫಿ ಸಅದಿ ಆವರು ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ನೀಡಿದರು.
ಇದೇ ವೇಳೆ ವಕ್ಫ್ ಕೌನ್ಸಿಲ್ ಅಧ್ಯಕ್ಷರಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ವಕ್ಫ್ ಸಚಿವರಾದ ಝಮೀರ್ ಅಹ್ಮದ್ ಖಾನ್ ಅವರಿಂದ ವೈಯಕ್ತಿಕವಾಗಿ 50 ಲಕ್ಷ ರೂ ಸಹಾಯಧನ ನೀಡುವುದಾಗಿ ಭರವಸೆ ನೀಡಿದ್ದಾಗಿ ಕುಟುಂಬಕ್ಕೆ ಮಾಹಿತಿ ನೀಡಿದರು.

ಈ ಬಗ್ಗೆ ಮಾಹಿತಿ ನೀಡಿರುವ ಮೌಲಾನಾ ಶಾಫಿ ಸಅದಿ, “ಸಚಿವರೊಂದಿಗೆ ಸರ್ಕಾರದ ಸಹಾಯ ಬೇಡಿಕೆಯೊಂದಿಗೆ , ವೈಯಕ್ತಿಕವಾದ ಸಹಕಾರವೊಂದು ಬೇಡಿಕೆಯಿಟ್ಟಿದ್ದೆ. ಸಚಿವರು ನನ್ನ ನಿರೀಕ್ಷೆಯನ್ನೂ ಮೀರಿ 50 ಲಕ್ಷ ಸ್ವಂತ ಹಣ ಆ ಕುಟುಂಬಕ್ಕೆ ವೈಯಕ್ತಿಕವಾಗಿ ನೀಡುವ ಭರವಸೆ ನೀಡಿದ್ದು, ಈ ಭೇಟಿಯಲ್ಲಿ ಕುಟುಂಬದೊಂದಿಗೆ ಆ ಸಂದೇಶವನ್ನೂ ಹಂಚಿಕೊಳ್ಳಲು ಕಳುಹಿಸಿಕೊಟ್ಟಿದ್ದರು. ಯಾವತ್ತೂ ಸಮುದಾಯದ ಪರ ನಿಲ್ಲುವ ಜಮೀರ್ ಅಹಮದ್ ಅವರ ಈ ವಾಗ್ದಾನ ಅವರ ಬಗ್ಗೆ ಮತ್ತಷ್ಟು ಗೌರವ ಹೆಚ್ಚಿಸಿದೆ. ಶೀಘ್ರದಲ್ಲೇ ಈ ಸಹಾಯದೊಂದಿಗೆ ಮನೆಗೆ ಭೇಟಿ ನೀಡುವ ಭರವಸೆಯೂ ನೀಡಿದ್ದಾರೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಬಂಟ್ವಾಳ | ಕೊಲೆಗೀಡಾದ ಅಬ್ದುಲ್ ರಹ್ಮಾನ್ ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತ ಕಾಂಗ್ರೆಸ್ ಮುಖಂಡ ಇನಾಯತ್ ಅಲಿ
ನಿಯೋಗದಲ್ಲಿ ವಕ್ಫ್ ಕೌನ್ಸಿಲ್ ಸದಸ್ಯರಾದ ಅನೀಸ್ ಕೌಸರಿ, ವಕ್ಫ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಬಿಎ ನಾಸಿರ್ ಲಕ್ಕಿ ಸ್ಟಾರ್ , ಚಿಕ್ಕಮಂಗಳೂರು ವಕ್ಫ್ ಅಧ್ಯಕ್ಷ ಸಾಹಿದ್ ರಝ್ವಿ , ಉಡುಪಿ ಜಿಲ್ಲಾ ಅಧ್ಯಕ್ಷರು ಸಿ ಹೆಚ್ ಅಬ್ದುಲ್ ಮುತ್ತಲಿಬ್ ವಂಡ್ಸೆ, ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಮ್ ಮೋಂಟುಗೊಳಿ, ಕೋಶಾಧಿಕಾರಿ ಮನ್ಸೂರ್ ಕೋಟು ಗದ್ದೆ, ಕೆ.ಸಿ.ಎಫ್ ರಾಷ್ಟೀಯ ನಾಯಕ ಹಂಝ ಮೈಂದಾಳ, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ನಾಯಕರಾದ ಅಶ್ರಫ್ ಸಅದಿ ಮಲ್ಲೂರು, ಅಶ್ರಫ್ ಕಿನಾರ, ಎಸ್ ವೈ ಎಸ್ ನಾಯಕರಾದ ಅಡ್ವೊಕೇಟ್ ಹಂಝತ್ , ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಹಸೈನಾರ್ ಆನೆಮಹಲ್ , ಬದ್ರುದ್ದೀನ್ ಅಝ್ಝರಿ, ಸತ್ತಾರ್ ಸಖಾಫಿ , ಇಸ್ಮಾಯಿಲ್ ಮಾಸ್ಟರ್ ಮಂಜನಾಡಿ , ನವಾಝ್ ಸಖಾಫಿ ಅಡ್ಯಾರ್ ಪದವು, ರಿಯಾಝ್ ಸಅದಿ , ಎಸ್ ಎಸ್ ಎಫ್ ರಾಜ್ಯ ಕೋಶಾಧಿಕಾರಿ ಇರ್ಷಾದ್ ಹಾಜಿ ಗೂಡೀನಬಳಿ, ರಷೀದ್ ವಗ್ಗ, ನಜೀಬ್ ಕೈಕಂಬ, ಅಬೂಬಕ್ಕರ್ ಸಿದ್ದೀಕ್ ಕಾಜೂರು, ಅಬ್ದುರ್ರಹ್ಮಾನ್ ಮೊಗರ್ಪನೆ, ಸೈದುದ್ದೀನ್ , ರಝಾಕ್ ಭಾರತ್, ಹಬೀಬ್ ಅಡ್ಡೂರು, ಸ್ಥಳೀಯ ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ , ಸಿರಾಜ್ ಬಜ್ಪೆ, ನಿಸಾರ್ ಕರಾವಳಿ, ಅಬೂಬಕ್ಕರ್ ಸಜಿಪ, ಬಶೀರ್ ಕೈಕಂಬ , ಆಸೀಪ್ ಸ ಅದಿ ಕೈಕಂಬ ಸಹಿತ ಹಲವು ನಾಯಕರು ಉಪಸ್ಥಿತರಿದ್ದರು.