ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿರುವ ಅನುಗ್ರಹ ಮಹಿಳಾ ಕಾಲೇಜಿನ ಮೌಲ್ಯ ಶಿಕ್ಷಣ ವಿಭಾಗದ ವತಿಯಿಂದ ಮೊಹರಂ ಸಂದೇಶ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಹೇಮಲತ ಬಿ.ಡಿ ಯವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮೌಲ್ಯ ಶಿಕ್ಷಣ ವಿಭಾಗದ ಉಪನ್ಯಾಸಕಿ ರಾಬಿಯಾ ಅಬ್ದುಲ್ ರಹೀಮ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಹಿಜರಿ ಕ್ಯಾಲೆಂಡರ್‌ನ ಚರಿತ್ರೆಯನ್ನು ವಿವರಿಸುವುದರೊಂದಿಗೆ ಅದರ ಪ್ರಥಮ ತಿಂಗಳಾದ ಮೊಹರಂ ತಿಂಗಳ ಮಹತ್ವವನ್ನು ಸವಿಸ್ತಾರವಾಗಿ ತಿಳಿಸಿದರು.
ಮರ್ದಿತರಿಗೆ ದೇವನ ಕಡೆಯಿಂದ ಸಹಾಯ ಒದಗಿ ಬಂದ ಮಾಸವಾಗಿದೆ ಅದು. ಮರ್ದಿತನು ನಿರಂತರ ಮರ್ದಿಸಲ್ಪಡುತ್ತಲೇ ಇರಲು ಸಾಧ್ಯವಿಲ್ಲ. ಒಂದು ದಿನ ಅವನ ಪಾಲಿಗೆ ಖಂಡಿತ ದೇವನ ಸಹಾಯ ಬಂದೇ ಬರುವುದು. ಅದಕ್ಕಾಗಿ ಸಹನೆಯಿಂದ ಅವನು ಸತ್ಯ ಮತ್ತು ನ್ಯಾಯದ ಮೇಲೆ ಸ್ಥಿರವಾಗಿ ನಿಂತು ಮರ್ದಕನ ವಿರುದ್ಧ ಹೋರಾಡುತ್ತಲೇ ಇರಬೇಕಾಗುತ್ತದೆ ಎಂದು ವಿವರಿಸಿದರು.

ವೇದಿಕೆಯಲ್ಲಿ ಕಾಲೇಜಿನ ಸಲಹಾ ಸಮಿತಿಯ ಕಾರ್ಯದರ್ಶಿ ಶ್ರೀಮತಿ ತಾರಾಕ್ಷಿ, ಪದವಿ ಪೂರ್ವ ವಿಭಾಗದ ಸಂಯೋಜಕಿ ಶ್ರೀಮತಿ ಮಮಿತಾ ಎಸ್.ರೈ, ಪದವಿ ವಿಭಾಗದ ಸಂಯೋಜಕಿ ಶ್ರೀಮತಿ ಆಬಿದಾ ಬಿ.ಉಪಸ್ಥಿತರಿದ್ದರು.ಇ
ಇದನ್ನು ಓದಿದ್ದೀರಾ? ‘ಸಿಗಂದೂರು ಚೌಡೇಶ್ವರಿ ಸೇತುವೆ’ ಹೆಸರಿಗೆ ಸ್ಥಳೀಯರ ಭಾರೀ ವಿರೋಧ; ಸಂಸದ ರಾಘವೇಂದ್ರ ತರಾತುರಿ ಮಾಡಿದ್ದೇಕೆ?
ಕಾಲೇಜಿನ ಸಲಹಾ ಸಮಿತಿಯ ಸದಸ್ಯರಾದ ಶ್ರೀಮತಿ ನವ್ಯ ಮತ್ತು ಶ್ರೀಮತಿ ಶಫೀಕಾ, ಉಪನ್ಯಾಸಕ ವೃಂದದವರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದ್ವಿತೀಯ ವಿಜ್ಞಾನ ವಿಭಾಗದ ಖದೀಜ ಮಾಹಿರಾ ಇವರು ಸ್ವಾಗತಿಸಿ, ವಂದಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.
