ಬಂಟ್ವಾಳ | ತಾಲೂಕು ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಆರೋಗ್ಯಾಧಿಕಾರಿಯನ್ನು ಭೇಟಿಯಾದ ಎಸ್‌ಡಿಪಿಐ ನಿಯೋಗ

Date:

Advertisements

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷರಾದ ಶಾಹುಲ್ ಹಮೀದ್ ಎಸ್.ಎಚ್. ಅವರ ನೇತೃತ್ವದ ನಿಯೋಗವು ತಾಲೂಕು ಆರೋಗ್ಯಾಧಿಕಾರಿ ಡಾ. ವಿಘ್ನೇಶ್ವರ್ ರವರನ್ನು ಭೇಟಿ ಮಾಡಿ, ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕೆಂದು ಆಗ್ರಹಿಸಿತು.

ನಿಯೋಗದಲ್ಲಿ ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ಹಾಗೂ ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷ ಶರೀಫ್ ವಳವೂರು ಉಪಸ್ಥಿತರಿದ್ದರು.

ಇದನ್ನು ಓದಿದ್ದೀರಾ? ಸೈಬರ್ ವಂಚನೆ | ಸೋಲಿಡಾರಿಟಿ ಯೂತ್ ಮೂವ್‌ಮೆಂಟ್‌ನಿಂದ ಸೆ.15ರವರೆಗೆ ರಾಜ್ಯಾದ್ಯಂತ ಜಾಗೃತಿ ಅಭಿಯಾನ

Advertisements

ನಿಯೋಗವು, ಕಳೆದ ತಿಂಗಳಿನಲ್ಲಿ ತಾಲೂಕು ಮುಖ್ಯ ವೈದ್ಯರಾದ ಡಾಕ್ಟರ್ ಪುಷ್ಪಲತಾ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಬಂಟ್ವಾಳ ತಾಲೂಕಿನ ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರಿ ಆಸ್ಪತ್ರೆಯ ಮೂಲಭೂತ ಸೌಕರ್ಯಗಳನ್ನು ಬಲಪಡಿಸುವುದು ಹಾಗೂ ವೈದ್ಯಕೀಯ ಸೇವೆ ನಿರಂತರವಾಗಿ ಲಭ್ಯವಾಗುವಂತೆ ಮಾಡುವ ತುರ್ತು ಅಗತ್ಯವನ್ನು ಅಧಿಕಾರಿಗಳ ಗಮನಕ್ಕೆ ತಂದಿತು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಸೋಲಿಡಾರಿಟಿ ಯೂತ್ ಮೂವ್ಮೆಂಟ್ ವತಿಯಿಂದ ಆಗಸ್ಟ್ 25ರಿಂದ ಸೆಪ್ಟೆಂಬರ್ 15ರವರೆಗೆ ಜಾಗೃತಿ ಅಭಿಯಾನ: ಜೇಬ್ರಿನ್ ಖಾನ್

"ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ವತಿಯಿಂದ ರಾಜ್ಯಾದ್ಯಂತ ಜಾಗೃತಿ ಅಭಿಯಾನವನ್ನು ಆಗಸ್ಟ್...

ಉತ್ತರ ಕನ್ನಡ | ಲಾಟರಿ, ಮಟ್ಕಾ ನಿಯಂತ್ರಣಕ್ಕೆ ಜಿಲ್ಲಾಧಿಕಾರಿಗಳಿಂದ ಸ್ಕ್ವಾಡ್ ರಚನೆ

ಕರ್ನಾಟಕ ರಾಜ್ಯ ಲಾಟರಿ ರೆಗ್ಯೂಲೇಶನ್ ಆ್ಯಕ್ಟ್ 1998 ಮತ್ತು ಸರ್ಕಾರದ ಆದೇಶದಂತೆ...

ಚಿಕ್ಕಬಳ್ಳಾಪುರ | ಒಳ ಮೀಸಲಾತಿ: ರಾಜ್ಯ ಸರ್ಕಾರದ ತೀರ್ಮಾನ ಸ್ವಾಗತಾರ್ಹ; ಪಟ್ರೇನಹಳ್ಳಿ ಕೃಷ್ಣ

ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಸಂಭಂದ ಬಲಗೈ ಹಾಗೂ ಎಡಗೈ...

ರಾಯಚೂರು | ಸೈಬರ್ ವಂಚನೆ, ಜೂಜಾಟ, ವ್ಯಸನದ ವಿರುದ್ಧ ಸಾಲಿಡಾರಿಟಿ ಜಾಗೃತಿ ಅಭಿಯಾನ : ಸೈಯದ್ ತನ್ವೀರ್

ಯುವ ಪೀಳಿಗೆಯನ್ನು ಸೈಬರ್ ವಂಚನೆ, ಆನ್‌ಲೈನ್ ಜೂಜಾಟ ಹಾಗೂ ಗೇಮಿಂಗ್ ವ್ಯಸನದ...

Download Eedina App Android / iOS

X