ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಈ ಬಾರಿಯ ರಂಜಾನ್ ಹಬ್ಬದ ಸ್ವಾಗತ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ವಾಗ್ಮಿ, ಕುರಾನ್ ಪ್ರವಚನಕಾರ, ಜಮಾತೆ ಇಸ್ಲಾಮಿ ಮಂಗಳೂರು ಶಾಖೆಯ ಅಧ್ಯಕ್ಷ ಜನಾಬ್ ಇಸ್ಹಾಕ್ ಪುತ್ತೂರು ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಪ್ರವಚನ ನೀಡಿದರು. “ರಂಜಾನ್ ತಿಂಗಳಲ್ಲಿ ಓರ್ವ ವ್ಯಕ್ತಿಯ ಸಂಪೂರ್ಣ ತರಬೇತಿ ಮತ್ತು ಸಂಸ್ಕರಣೆ ಹೇಗೆ ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಡುವುದರೊಂದಿಗೆ ರಂಜಾನ್ ತಿಂಗಳಲ್ಲಿ ಸಂಸ್ಕರಿಸಲ್ಪಡದವರು ಮತ್ತೆಂದೂ ತರಬೇತು ಹೊಂದಲು ಸಾಧ್ಯವಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ?: ಬಂಟ್ವಾಳ | ಆತ್ಮರಕ್ಷಣೆಯ ರಿವಾಲ್ವರ್‌ನಿಂದ ಮಿಸ್‌ಫೈರ್: ಜಿಲ್ಲಾ ಕಾಂಗ್ರೆಸ್ ಮುಖಂಡನಿಗೆ ಗಾಯ, ಆಸ್ಪತ್ರೆಗೆ ದಾಖಲು
ಕಾರ್ಯಕ್ರಮದಲ್ಲಿ ಅನುಗ್ರಹ ವಿದ್ಯಾ ಸಂಸ್ಥೆಯ ಅಧ್ಯಕ್ಷ ಜನಾಬ್ ಯಾಸೀನ್ ಬೇಗ್, ಖಜಾಂಜಿ ಹೈದರ್ ಅಲಿ, ಕಾರ್ಯದರ್ಶಿ ಅಬ್ದುಲ್ಲಾ ಕುಂಞ, ಅನುಗ್ರಹ ಕಾಲೇಜಿನ ಪ್ರಾಂಶುಪಾಲೆ ಡಾ. ಹೇಮಲತಾ ಬಿ ಡಿ, ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕಿಯರು ಭಾಗವಹಿಸಿದ್ದರು.
