ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್‌ಐಓ) ಪಾಣೆಮಂಗಳೂರು ಶಾಖೆಯು 2025 ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕು ಮಟ್ಟದಲ್ಲಿ ಶ್ರೇಷ್ಠ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅವರ ಮನೆಗಳಿಗೆ ಭೇಟಿ ನೀಡಿ ಸನ್ಮಾನ ನಡೆಸಲಾಯಿತು.
ಅಜ್ಕಾ ಖತೀಜಾ ಕುನ್ನಿಲ್, ಪ್ರಾರ್ಥನಾ ಎಚ್.ಕೆ, ಮತ್ತು ತನ್ವಿ ಎಂಬ ವಿದ್ಯಾರ್ಥಿಗಳ ಮನೆಗಳಿಗೆ ಎಸ್‌ಐಒ ತಂಡವು ಭೇಟಿ ನೀಡಿದ್ದು, ಅವರ ಶೈಕ್ಷಣಿಕ ಸಾಧನೆಯನ್ನು ಮೆಚ್ಚಿ ಸ್ಮರಣಿಕೆ ನೀಡುವ ಮೂಲಕ ಗೌರವ ಸಲ್ಲಿಸಿತು.

ಕಾರ್ಯಕ್ರಮದಲ್ಲಿ ಎಸ್‌ಐಒ ಮುಖಂಡರಾದ ಅಫ್ಸಾನ್, ಅಬ್ದುಲ್ ರಹ್ಮಾನ್,ಖೈಸ್ ಮತ್ತು ಸಫ್ವಾನ್ ಉಪಸ್ಥಿತರಿದ್ದು ವಿದ್ಯಾರ್ಥಿಗಳ ಸಾಧನೆಯ ಕುರಿತು ಸಂತೋಷ ವ್ಯಕ್ತಪಡಿಸಿದರು. ಅವರು ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣ ಹಂತಗಳಲ್ಲಿ ಸಹ ಪ್ರಗತಿ ಸಾಧಿಸಲು ಅಗತ್ಯವಿರುವ ಮಾರ್ಗದರ್ಶನವನ್ನು ನೀಡಿದರು.
ಪೋಷಕರನ್ನು ಮತ್ತು ಕುಟುಂಬ ಸದಸ್ಯರನ್ನು ಸಹ ಈ ಸಂದರ್ಭದಲ್ಲಿ ಗೌರವಿಸಿ, ವಿದ್ಯಾರ್ಥಿಗಳ ಯಶಸ್ಸಿಗೆ ಅವರ ಕೊಡುಗೆಯನ್ನು ಕೂಡ ಇದೇ ವೇಳೆ ಗುರುತಿಸಲಾಯಿತು.
