ಕೊಡಗು ಜಿಲ್ಲೆ ,ಪೊನ್ನಂಪೇಟೆ ತಾಲ್ಲೂಕು, ಬೇಗೂರು ಗ್ರಾಮದಲ್ಲಿ 6 ವರ್ಷದ ಮಗು ಸೇರಿದಂತೆ ನಾಲ್ವರ ಬರ್ಬರ ಹತ್ಯೆಯಾಗಿದ್ದು,ಆರೋಪಿ ಪರಾರಿಯಾಗಿದ್ದಾನೆ.ಹತ್ಯೆಗೆ ಕಾಫಿ ಬೆಳೆ ಕಾರಣವಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಕಾವೇರಿ (6) ,ಕರಿಯ (75), ಗೌರಿ (70), ನಾಗಿ (35) ಮೃತಪಟ್ಟ ದುರ್ದೈವಿಗಳು. ಕೊಲೆ ಆರೋಪಿ ಗಿರೀಶ್ (35) ಕತ್ತಿಯಿಂದ ಹಲ್ಲೆ ಮಾಡಿ, ಕೊಲೆಗೈದು ಪರಾರಿಯಾಗಿದ್ದು, ಸ್ಥಳಕ್ಕೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಹಾಗೂ ಪೊನ್ನಂಪೇಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಮುಂಗಾರಿನ ಮೊದಲ ಉಳುಮೆ ‘ ಹೊನ್ನಾರು ‘
ಆರೋಪಿಯ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆಂದು ತಿಳಿದು ಬಂದಿದೆ.
