ಉಡುಪಿ ಜಿಲ್ಲೆಯ ಬಾರ್ಕೂರಿನ ರೈಲ್ವೆ ಸ್ಟೇಷನ್ ನಲ್ಲಿ ಮುಂಬಾಯಿಂದ ಬರುವಂತಹ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ಪ್ಲಾಟ್ ಫಾರ್ಮ್ ನಲ್ಲಿ ನಿಲ್ಲಿಸಲಾಗದೆ ಬೇರಡೆ ನಿಲ್ಲಿಸಿ ಸಾರ್ವಜನಿಕರಿಗೆ ಜೀವಕ್ಕೆ ತೊಂದರೆದ ಘಟನೆಯ ವೀಡಿಯೋ ಒಂದು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು.

ಸುಮಾರು 35-40 ಜನರು ವಯಸ್ಸಾದವರು, ಮಕ್ಕಳು, ಮಹಿಳೆಯರು 5-6 ಅಡಿ ಕೆಳಗೆ ಇಳಿಯಲಿಕ್ಕೆ ಬೆಳಗಿನ ಜಾವದ ಕತ್ತಲೆಯಲ್ಲೆ ಲೈಟ್ ವ್ಯವಸ್ಥೆ ಇಲ್ಲದೆ ಪ್ಲಾಟ್ ಫಾರಂ ನಿಂದ ಇಳಿದು ಹತ್ತಲು ಹರಸಾಹಸ ಪಡುವ ದೃಶ್ಯ ಆ ವೀಡಿಯೋದಲ್ಲಿ ಹರಿದಾಡುತ್ತಿತ್ತು.
ಕಳೆದ ಎರಡು ವರ್ಷಗಳಿಂದ ಹಾಗೂ ಸತತ ಎರಡು ತಿಂಗಳಿನಿಂದ ನಿರಂತರ ತೊಂದರೆ ಅನುಭವಿಸುತ್ತಿದ್ದೇವೆ ಬಾರ್ಕೂರು ರೈಲ್ವೆ ಸಿಬ್ಬಂದಿಗೆ ಇದರ ಬಗ್ಗೆ ತಿಳಿಸಿದರೆ ಇದು ದಿನನಿತ್ಯ ನಡೆಯುತ್ತಾ ಇರುತ್ತದೆ, ನೀವೆ ಮೇಲಿನ ಅಧಿಕಾರಿಗಳೊಂದಿಗೆ ತಿಳಿಸಿ ಎಂದು ತಪ್ಪಿಸಿಕೊಳ್ಳವ ಪ್ರಯತ್ನ ಹಾಗೂ ಮೇಲಿನ ಅಧಿಕಾರಿಗಳ ಹತ್ತಿರ ಮಾತನಾಡಿದರೆ ನೀವು ಇದರ ಬಗ್ಗೆ ಒಂದು ದೂರು ಎಲ್ಲರು ಸೇರಿ ಕೊಡಿ ನಾವು ಪರಿಶೀಲಿಸುತ್ತೆವೆ, ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರಯಾಣಿಕರು ಅಕ್ರೋಶ ವ್ಯಕ್ತಪಡಿಸಿದ್ದರು.
ಈ ದಿನ.ಕಾಮ್ ಜೊತೆ ಮಾತನಾಡಿದ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ಬಾರಕೂರು ರೈಲು ನಿಲ್ದಾಣದಲ್ಲಿ ಎರಡನೇ ಪ್ಲಾಟ್ ಫಾರ್ಮ್ ನಿರ್ಮಾಣ ಮಾಡುವಂತೆ ಮತ್ತು ಪ್ಲಾಟ್ ಫಾರಂ ನಿರ್ಮಾಣ ವಾಗುವವರೆಗೆ ಎರಡನೇ ಪ್ಲಾಟ್ ಫಾರಂ ಜಾಗವನ್ನು ಸಮತಟ್ಟುಗೊಳಿಸಿ ಹತ್ತಿಳಿಯಲು ತಾತ್ಕಾಲಿಕ ವ್ಯವಸ್ಥೆ ರೂಪಿಸುವಂತೆ ಕೊಂಕಣ ರೈಲ್ವೆ ನಿಗಮವನ್ನು ಆಗ್ರಹಿಸಿದ್ದೇವೆ.

ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯ ಅಡಿ ತಾರದೇ ಇರುವ ಕಾರಣಕ್ಕಾಗಿ ಬಜೆಟ್ ಅನುದಾನವೇ ಸಣ್ಣ ಪುಟ್ಟ ಕೆಲಸಗಳಿಗೂ ಸಿಗುತ್ತಿಲ್ಲ. ಕನಿಷ್ಟ ಪ್ಲಾಟ್‌ಫಾರ ನಿರ್ಮಾಣಕ್ಕೂ ಹೋರಾಟಗಳು, ಮನವಿಗಳ ಅಗತ್ಯ ಇರುವಾಗ ಇನ್ನು ಡಬ್ಬಿಂಗ್ ರೀತಿಯ ಬೃಹತ್ ಯೋಜನೆಗಳು ಕೊಂಕಣ ನಿಗಮದಿಂದ ಜಾರಿಯಾಗಲು ಸಾಧ್ಯವೇ ಎಂದು ಪ್ರಶ್ನಿಸಿ ಕೊಂಕಣ ನಿಗಮ ಹಾಗೂ ಸಚಿವಾಲಯಕ್ಕೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.
ಈ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ಸಂಸದರು ಬರಿ ರೈಲು ಅಲ್ಲಿ ಇಲ್ಲಿ ಬಿಟ್ಟಿದ್ದೇವೆ ಅಂದರೆ ಸಾಕಾಗುದಿಲ್ಲ, ರೈಲು ಹತ್ತುವ ಮತ್ತು ಇಳಿಯುವ ವ್ಯವಸ್ಥೆ ಅತ್ಯಂತ ಮುಖ್ಯ, ಕಳೆದ ಕೆಲವು ದಿನಗಳ ಹಿಂದೆ ಬಾರ್ಕುರು ರೈಲ್ವೆ ನಿಲ್ದಾಣ ದಲ್ಲಿ ಮುಂಬೈಯಿಂದ ಬಂದಿರುವ ಮತ್ಸ್ಯಗಂದ ರೈಲಿನಿಂದ ಇಳಿದು ರೈಲ್ವೆ ಹಳಿ ದಾಟಿ 4ರಿಂದ 5 ಫೀಟ್ ಎತ್ತರ ಹತ್ತುತಿರುವುದು ವಿಡಿಯೋವನ್ನು ಸಂಸದರ ಗಮನಕ್ಕೆ ಬಂದಿರಬಹುದು.
ಬೆಳಿಗ್ಗಿನ ಜಾವಾ 5 ಗಂಟೆ ಸಮಯಕ್ಕೆ ಮುಂಬೈ ಇಂದ ಬಾರ್ಕುರಿಗೆ ಬರುವ ರೈಲ್ವೆ ನಲ್ಲಿ ಸುಮಾರು 50 ರಿಂದ 60 ಜನ ಪ್ರಯಾಣಿಕರು ಬಾರ್ಕುರಿನಲ್ಲಿ ಇಳಿಯುತ್ತಾರೆ, ಅದು ಬರಿ 2 ನಿಮಿಷ ರೈಲು ನಿಲ್ಲಿಸುತ್ತಾರೆ, ಅವರಲ್ಲಿ ಹಿರಿಯರು, ಮಕ್ಕಳು,ವೃದ್ದರು, ಇದ್ದು, ರೈಲು ಇಳಿದಾಗ ಒಂದು ರೀತಿಯಲ್ಲಿ ದಿಕ್ಕೇ ತೋರದಂತೆ ಕಂಗಾಲಾಗುವ ಪ್ರಮೇಯ ಉಂಟಾಗಿತ್ತು
ರೈಲು ಹತ್ತುವ ಮತ್ತು ಇಳಿಯುವ ಪ್ರಯಾಣಿಕರಿಗೆ 2 ನೇ ಫ್ಲಾಟ್ ಫಾರ್ಮ್ಗೆ ಹೋಗಲು ಮೇಲು ಸೇತುವೆ ನಿರ್ಮಾಣ ಮಾಡಿ, ಮತ್ತು ತಾತ್ಕಾಲಿಕವಾಗಿ ಕೂಡಲೇ ಪ್ರಯಾಣಿಕರ ಹಿತದೃಷ್ಟಿಯಿಂದ 2 ನೇ ಫ್ಲಾಟ್ ಫಾರ್ಮೆಗೆ ಹೋಗಲು ಮತ್ತು ಬರಲು ಕೂಡಲೇ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಸ್ಥಳಕ್ಕೆ ಭೇಟಿ

ಬಾರ್ಕೂರು ರೈಲು ನಿಲ್ದಾಣದಲ್ಲಿ ಒಂದೇ ಫ್ಲಾಟ್ ಫಾರಂ ಇರುವುದರಿಂದ ಮುಂಬೈಯಿಂದ ಬರುವ ಮತ್ಸ್ಯಗಂಧ ರೈಲು ಕ್ರಾಸಿಂಗ್ ಸಂದರ್ಭದಲ್ಲಿ ಬಾರ್ಕೂರಿನಲ್ಲಿ ಇಳಿಯುವ ಪ್ರಯಾಣಿಕರಿಗೆ ಸಮಸ್ಯೆ ಆಗುತ್ತಿರುವ ಬಗ್ಗೆ ಸಾರ್ವಜನಿಕ ದೂರು ಬಂದಿದ್ದು ಹಾಗೂ ಬಾರ್ಕೂರು ರೈಲ್ವೆ ಹಿತರಕ್ಷಣಾ ಸಮಿತಿಯ ಮನವಿಯ ಮೇರೆಗೆ ರೈಲ್ವೆ ಅಧಿಕಾರಿಗಳೊಂದಿಗೆ ಬಾರ್ಕೂರು ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಹೊಸ ಪ್ಲಾಟ್ ಫಾರಂ,ಲೂಪ್ ಲೈನ್, ಮಲ್ಸೇತುವೆ ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
