ದೇರಳಕಟ್ಟೆಯಲ್ಲಿ ಏ.26ರಂದು ‘ಬ್ಯಾರೀಸ್ ಟರ್ನಿಂಗ್ ಪಾಯಿಂಟ್’ ಲೋಕಾರ್ಪಣೆ

Date:

Advertisements

ಬ್ಯಾರೀಸ್ ಗ್ರೂಪ್‌ನ ಬಹು ನಿರೀಕ್ಷಿತ ವಾಣಿಜ್ಯ ಹಾಗೂ ವಸತಿ ಯೋಜನೆ ‘ಬ್ಯಾರೀಸ್ ಟರ್ನಿಂಗ್ ಪಾಯಿಂಟ್’ ಇದೇ ಏಪ್ರಿಲ್ 26 ರಂದು ಉದ್ಘಾಟನೆಯಾಗುತ್ತಿದೆ ಎಂದು ಬ್ಯಾರೀಸ್ ಟರ್ನಿಂಗ್ ಪಾಯಿಂಟ್ ರಿಟೈಲ್ ಮುಖ್ಯಸ್ಥ ಕೆ. ನಂದಕುಮಾರ್ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಅವರು, “ಶಿವಮೊಗ್ಗದ ಬ್ಯಾರೀಸ್ ಸಿಟಿ ಸೆಂಟರ್ ಮಾಲ್ ನಲ್ಲಿ ಯಶಸ್ಸು ಸಾಧಿಸಿದ ಬಳಿಕ ಇದೀಗ ಮಂಗಳೂರು ಹೊರವಲಯದಲ್ಲಿರುವ ದೇರಳಕಟ್ಟೆಯಲ್ಲಿ ನಗರ ಜೀವನ ಶೈಲಿಯ ಈ ವಿಶಿಷ್ಟ ಯೋಜನೆ ಶುಭಾರಂಭವಾಗುತ್ತಿದೆ. ಈ ಯೋಜನೆಯ ಹೃದಯ ಭಾಗದಲ್ಲಿ ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಸೆಂಟರ್, ಆಧುನಿಕ ನಾಲ್ಕು ಪರದೆಗಳ ಮಲ್ಟಿಪ್ಲೆಕ್ಸ್, ವಿವಿಧ ಪಾಕ ವಿಧಾನಗಳನ್ನು ಒಳಗೊಂಡ ಸೊಗಸಾದ ಫುಡ್ ಕೋರ್ಟ್, ಜತೆಗೆ ಇಂಟರಾಕ್ಟಿವ್ ಆಟಗಳು, ನಾಲ್ಕು ಲೇನ್ ಬೌಲಿಂಗ್ ಅಲೈ, ದೊಡ್ಡ ಕ್ಲೈಂಬಿಂಗ್ ವಾಲ್, ಬಂಪರ್ ಕಾರುಗಳು, ಇಂಡೋರ್ ಕ್ರಿಕೆಟ್, ಮಕ್ಕಳಿಗಾಗಿ ಸಾಫ್ಟ್ ಏರಿಯಾ ಹಾಗೂ ಇತರ ವೈವಿಧ್ಯಮಯ ಆಟ ಹಾಗೂ ಮನೋರಂಜನೆಗಳು ಲಭ್ಯ ಇವೆ. ಗ್ರಾಹಕರಿಗೆ ಈ ಆಟಗಳಲ್ಲಿ ಭಾಗವಹಿಸಿ , ಫುಡ್ ಕೋರ್ಟ್ ನಲ್ಲಿ ರುಚಿಯಾದ ಖಾದ್ಯಗಳನ್ನು ಸವಿದು ಖುಷಿ ಪಡೆಯಲು ಶೀಘ್ರ ಅವಕಾಶ ಸಿಗಲಿದೆ” ಎಂದು ಅವರು ಹೇಳಿದ್ದಾರೆ.

WhatsApp Image 2025 04 23 at 3.59.38 PM

“ಮಲ್ಟಿಪ್ಲೆಕ್ಸ್, ಎಂಟರ್ ಟೈನ್ಮೆಂಟ್ ಸೆಂಟರ್ ಹಾಗೂ ಫುಡ್ ಕೋರ್ಟ್ ಒಂದೇ ಜಾಗದಲ್ಲಿ ಸಂಯೋಜನೆ ಆಗಿದೆ. ಎತ್ತರದ ಇಂಟೀರಿಯರ್ ಗಳು ಮತ್ತು ಗಾಜಿನ ಭಿತ್ತಿಗಳ ಮೂಲಕ ಆಂತರಿಕ ಹಾಗೂ ಬಾಹ್ಯ ಭಾವವನ್ನು ಒದಗಿಸುತ್ತದೆ. ಪ್ರತಿದಿನ ಬೆಳಗ್ಗಿನಿಂದ ರಾತ್ರಿವರೆಗೆ ವಿಭಿನ್ನ ವಾತಾವರಣ ಅನುಭವಿಸಬಹುದು. ಇಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಐದು ಬಾರಿ ನಮಾಝ್ ನಿರ್ವಹಣೆಗೆ ಪ್ರತ್ಯೇಕ ‌ವ್ಯವಸ್ಥೆ ಕಲ್ಪಿಸಲಾಗಿದೆ. ಬ್ಯಾರೀಸ್ ಟರ್ನಿಂಗ್ ಪಾಯಿಂಟ್ ನ ಈ ಹೊಸ ಯೋಜನೆಯು ದೇರಳಕಟ್ಟೆ ಪರಿಸರದ ಪ್ರಗತಿ, ಬದಲಾವಣೆ ಹಾಗೂ ಹೊಸ ದಿಕ್ಕನ್ನು ಸೂಚಿಸುತ್ತದೆ. ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ನಗರಗಳನ್ನು ವಿಶ್ವದರ್ಜೆಗೆ ಏರಿಸಬೇಕು ಎಂಬ ಇಲ್ಲಿನ ಶಾಸಕ ಹಾಗೂ ರಾಜ್ಯ ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್ ಅವರ ದೂರದೃಷ್ಟಿಯಂತೆ ಬ್ಯಾರೀಸ್ ಟರ್ನಿಂಗ್ ಪಾಯಿಂಟ್ ರೂಪುಗೊಂಡಿದೆ. ಅಲ್ಲದೇ ಇದೇ ಜಾಗದಲ್ಲಿ ವಿಶಾಲ ಹೈಪರ್ ಮಾರ್ಕೆಟ್ ಮತ್ತು ಅಂತಾರಾಷ್ಟ್ರೀಯ ಬ್ರಾಂಡ್ ಗಳ ಪ್ರಮುಖ ಔಟ್‌ಲೆಟ್ ಗಳು ಶೀಘ್ರ ಆರಂಭಗೊಳ್ಳಲಿವೆ. ಇದು ಶಾಪಿಂಗ್ ಹಾಗೂ ಮನರಂಜನೆಗೆ ಕೇಂದ್ರ ಬಿಂದು ಆಗಲಿದೆ” ಎಂದು ತಿಳಿಸಿದ್ದಾರೆ.

Advertisements

ಇದನ್ನೂ ಓದಿ: ಬೆಂಗಳೂರು | ಮೆಟ್ರೋದಲ್ಲಿ ಗುಟ್ಕಾ, ಪಾನ್ ಉಗುಳುವವರೇ ಎಚ್ಚರ! ಬೀಳಲಿದೆ ದಂಡ

ಸುದ್ದಿಗೋಷ್ಠಿಯಲ್ಲಿ ಇಂಟೀರಿಯರ್ ಮತ್ತು ಫಿಟ್ ಔಟ್ಸ್ ನ ಸೀನಿಯರ್ ಮ್ಯಾನೇಜರ್ ಕೋಡಿ ಮೊಹಮ್ಮದ್ ಇಕ್ಬಾಲ್, ಮಾರ್ಕೆಟಿಂಗ್ ವಿಭಾಗದ ಅಸಿಸ್ಟೆಂಟ್ ಮ್ಯಾನೇಜರ್ ಪ್ರಫುಲ್ಲ ಪುಷ್ಪರಾಜ್, ಪಿಆರ್‌ಒ ಬಾಪು ನೈನಾರ್ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X