ವಿಮಾನಗಳ ಕೊರತೆಯಿಂದ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು ಬೆಳಗಾವಿ-ಬೆಂಗಳೂರು ಮಧ್ಯೆ ಅಕ್ಟೋಬರ್ 28ರಿಂದ ಬೆಳಗಿನ ಅವಧಿಯಲ್ಲಿ ಹಾರಾಟ ಸ್ಥಗಿತಗೊಳಿಸಿತ್ತು. ಇದರಿಂದ ಬೆಳಗಾವಿಯ ವಿಮಾನ ಪ್ರಯಾಣಿಕರು ಆಕ್ರೋಶಗೊಂಡಿದ್ದರು.
ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು ಬೆಳಗಾವಿ-ಬೆಂಗಳೂರು ಮಾರ್ಗದಲ್ಲಿ ಡಿಸೆಂಬರ್ 20ರಿಂದ ಬೆಳಗಿನ ಅವಧಿಯಲ್ಲಿ ವಿಮಾನ ಸಂಚಾರ ಪುನರಾರಂಭ ಮಾಡುತ್ತಿರುವುದಾಗಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನಮ್ಮ ಪರಿಸರವನ್ನು ನಾವೇ ಸ್ವಚ್ಛವಾಗಿಡಬೇಕು; ನಾಗರಿಕರಿಗೆ ಕರೆ
ಮಾದ್ಯಮದವರೊಂದಿಗೆ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, “ನನ್ನ ಮನವಿ ಮೇರೆಗೆ ವಿಮಾನ ಸೇವೆ ಪುನರಾರಂಭ ಮಾಡಿರುವುದು ಒಳ್ಳೆಯ ವಿಚಾರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ವಾರದ ಎಲ್ಲ ದಿನವೂ ವಿಮಾನ ಸೇವೆ ಲಭ್ಯ ಇರಲಿದ್ದು, ಈಗಾಗಲೇ ಬುಕಿಂಗ್ ಸಹ ಆರಂಭವಾಗಿದೆ” ಎಂದು ತಿಳಿಸಿದ್ದಾರೆ.