ಬೆಳಗಾವಿ ಜಿಲ್ಲೆಯ ಅಥಣಿಯ ಹುಲಗಬಾಳಿ ರಸ್ತೆಯ ಸ್ವಾಮಿ ಬಡಾವಣೆಯ ಮಕ್ಕಳ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳ ಕಾಲಿಗೆ ಗುಂಡು ಹಾರಿಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಇಬ್ಬರು ಮಕ್ಕಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯ ದೇಸಾಯಿ ಎಂಬುವರ ಮನೆಗೆ ನುಗ್ಗಿ ಇಬ್ಬರು ಮಕ್ಕಳನ್ನು ಅಪಹರಿಸಿ ಆರೋಪಿಗಳು ಪರಾರಿಯಾಗಿದ್ದ ವಿಷಯ ತಿಳಿದ ಕೂಡಲೇ ಅಥಣಿ ಪೊಲೀಸರು ಮೂರು ತಂಡ ರಚಿಸಿ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಮಕ್ಕಳನ್ನು ಅಪಹರಿಸಿದ್ದವರು ಮಹಾರಾಷ್ಟ್ರದ ಗಡಿ ಕೋಹಳ್ಳಿ ಸಿಂಧೂರ ಎಂಬಲ್ಲಿ ಹೋಗುವಾಗ ಪೋಲಿಸರು ಅಪಹರಣಕಾರರನ್ನು ತಡೆಗಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ನೀರು ಕೇಳುವ ನೆಪದಲ್ಲಿ ಇಬ್ಬರು ಮಕ್ಕಳ ಅಪಹರಣ
ಈ ಸಂದರ್ಭದಲ್ಲಿ ಅಪಹರಣಕಾರರು ತಪ್ಪಿಸಿಕೊಳ್ಳಲು ಪೋಲಿಸರ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಅಪಹರಣಕಾರರ ಕಾಲಿಗೆ ಗುಂಡು ಹಾರಿಸಿ ಮೂವರನ್ನು ಬಂಧಿಸಿ ಇಬ್ಬರು ಮಕ್ಕಳನ್ನು ರಕ್ಷಿಸಿದ್ದಾರೆ.
ಮಕ್ಕಳ ಅಪಹರಣಕಾರರನ್ನು ಅತ್ಯಂತ ವೇಗವಾಗಿ ಬಂಧಿಸಿದ ಪೊಲೀಸರ ಸಾಹಸಕ್ಕೆ ಸಾರ್ಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.