ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೊಗನಿಹಾಳ ಗ್ರಾಮದ ಬಳಿ ಗುರುವಾರ ಘಟಪ್ರಭಾ ನದಿಯ ಸೇತುವೆ ಮೇಲೆ ಹೊರಟಿದ್ದ ಬೈಕ್ ನದಿಗೆ ಬಿದ್ದು ದಂಪತಿ ನೀರುಪಾಲಾಗಿದ್ದರು. ಪತ್ನಿಯ ಶವ ಪತ್ತೆಯಾಗಿದ್ದು, ಪತಿಯ ಮೃತದೇಹಕ್ಕಾಗಿ ಹುಡುಕಾಟ ನಡೆದಿದೆ.
ಘೋಡಗೇರಿ ಗ್ರಾಮದಿಂದ ಚಿಕ್ಕೋಡಿ ತಾಲೂಕಿನ ಪೊಗತ್ಯಾನಟ್ಟಿ ಗ್ರಾಮಕ್ಕೆ ದಂಪತಿ ಬೈಕ್ ಮೇಲೆ ತೆರಳುತ್ತಿದ್ದರು. ಸೇತುವೆ ಮೇಲೆ ಎದುರಿಗೆ ಬಂದ ವಾಹನಕ್ಕೆ ದಾರಿ ಬಿಡುವ ಸಂದರ್ಭದಲ್ಲಿ ಬೈಕ್ ಜಾರಿ ನದಿಗೆ ಬಿದ್ದಿದು, ದಂಪತಿ ನೀರು ಪಾಲಾಗಿದ್ದರು. ಪತ್ನಿ ಜಯಶ್ರೀ ಸುರೇಶ ಬಡಿಗೇರ(45) ಶವ ಪತ್ತೆಯಾಗಿದೆ. ಇವರ ಪತಿ ಸುರೇಶ ಗುಂಡಪ್ಪ ಬಡಿಗೇರ(54) ನೀರುಪಾಲಾಗಿದ್ದಾರೆ. ಹುಡುಕಾಟ ನಡೆದಿದೆ.
ಈ ಸುದ್ದಿ ಓದಿದ್ದೀರಾ? ಕೊಡಗು | ತಲಕಾವೇರಿಯಲ್ಲಿ ತೀರ್ಥೋದ್ಭವ ಜಾತ್ರಾ ಸಂಭ್ರಮ
ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನದಿನೀರು ರಭಸವಾಗಿ ಹರಿಯುತ್ತಿರುವ ಕಾರಣ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.