ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಕರಿಸಿದ್ದೇಶ್ವಸರ ದೇವಸ್ಥಾನದ ದೃವ ಎಂಬ ಆನೆ ದಾಳಿಯಿಂದ ಮಾವುತ ಮೃತಪಟಿರುವ ಘಟನೆ ನಡೆದಿದೆ.
ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ಧರೆಪ್ಪ ಬೇವನೂರ(28) ಮೃತಪಟ್ಟಿರುವ ಮಾವುತ. ಮೇವು ಹಾಕಲು ಬಂದ ಮಾವುತನನ್ನು ಆನೆ ತುಳಿದಿರುವುದಾಗಿ ತಿಳಿದುಬಂದಿದೆ. ದೃವ ಆನೆಗೆ ರಾತ್ರಿ ಮದ ಬಂದಂತಿತ್ತು. ಬೆಳಿಗ್ಗೆಯೂ ಕೂಡ ಮದದಲ್ಲಿಯೇ ಇದ್ದುದ್ದರಿಂದ ಮೇವು ಹಾಕಲು ಬಂದ ಮಾವುತನ ಮೇಲೆ ದಾಳಿ ಮಾಡಿದೆ. 30 ವರ್ಷದ ದೃವ ಎಂಬ ಆನೆ ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ವಾಸವಾಗಿತ್ತು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಅಧಿವೇಶನದ ಶತಮಾನೋತ್ಸವ; ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಲು ಡಿಕೆಶಿ ಕರೆ
ಧರೆಪ್ಪ ಬೇವನೂರ ಅವರ ಪತ್ನಿ 10 ದಿನದ ಹಿಂದಷ್ಟೇ ಗಂಡು ಮಗು ಜನ್ಮ ನೀಡಿದ್ದರು. ಮಗು ಅಪ್ಪನ ಮುಖವನ್ನು ನೋಡುವ ಮೊದಲೇ ಇವರು ಮೃತಪಟ್ಟಿರುವುದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಾರೂಗೇರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.