ಸಂಯುಕ್ತ ಹೋರಾಟ ಕರ್ನಾಟಕ ಸಮನ್ವಯ ಸಮಿತಿ ನೈತೃತ್ವದಲ್ಲಿ ರೈತ ಮತ್ತು ಕಾರ್ಮಿಕರು ಬೆಳಗಾವಿ ನಗರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಎಚ್ಚರಿಕೆ ಜಾಥಾದೊಂದಿಗೆ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸಿದರು.
ಸಂವಿಧಾನ ಪೀಠಿಕೆ ಓದುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದ ಬಳಿಕ ರಾಣಿ ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳನ್ನು ಖಂಡಿಸಿ ಘೋಷಣೆ ಕೂಗಿದರು.
ಸಿದ್ದಗೌಡ ಮೋದಗಿ ಮಾತನಾಡಿ, “ರೈತ, ದಲಿತ, ಕಾರ್ಮಿಕರ ಮೇಲಿನ ಅನ್ಯಾಯ ಹಾಗೂ ಮಣಿಪುರ ಹಿಂಸಾಚಾರ ನಿಲ್ಲಿಸಬೇಕು. ಸೈಬರ್ ಕ್ರೈಂ ತಡೆಗೆ ಕ್ರಮವಹಿಸಬೇಕು” ಎಂದು ಆಗ್ರಹಿಸಿದರು.
ರೈತ ಮುಖಂಡ ಬಸವರಾಜ ಮೋಕಾಶಿ ಮಾತನಾಡಿ, “ಕಬ್ಬು ಬೆಳೆಗಾರರಿಗೆ ಅನ್ಯಾಯವಾಗುತ್ತಿದ್ದು, ಈ ಬಗ್ಗೆ ಕ್ರಮವಹಿಸಬೇಕು. ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆಯಾಗುವುದನ್ನು ತಡೆಯಬೇಕು. ಸರ್ಕಾರಗಳು ರೈತ ಮತ್ತು ಕಾರ್ಮಿಕರ ಪರವಾದ ಯೋಜನೆಗಳನ್ನು ಜಾರಿಗೆ. ದಲಿತ ಮತ್ತು ರೈತರಿಗೆ ಕೆಂದ್ರ ಸರ್ಕಾರ ಅನ್ಯಾಯ ಮಾಡುತ್ತಿದ್ದು, ಇದನ್ನು ಸರಿಪಡಿಸಬೇಕು” ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಪ್ರೊ.ಯಲ್ಲಪ್ಪ ಹಿಮ್ಮಡಿ, ಕಾರ್ಮಿಕ ಮುಖಂಡ ಗೈಬು, ದಲಿತ ಮುಖಂಡ ಕಲ್ಲಪ್ಪ ಕಾಂಬ್ಲೆ ಸೇರಿದಂತೆ ಹಲವರು ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ರೈತ-ಕಾರ್ಮಿಕಾ ವಿರೋಧಿ ನೀತಿಗಳ ವಿರುದ್ಧ ಎಚ್ಚರಿಕಾ ರ್ಯಾಲಿ
ಗುಂಡು ತಳವಾರ, ಬಾಳಪ್ಪಾ ಪಾಟೀಲ, ಡಾ. ಡಿ ಎಸ್ ಚೌಗಲೆ, ನಂದಾ ನೇವಗೆ, ಶಿವಲೀಲಾ ಮಿಸಾಳೆ, ನಿಂಗಪ್ಪಾ ಸುಣಕುಂಪಿ, ಸಂಜೀವ ಡೊಂಗರಗಾವಿ, ರಮೇಶ ಹಮ್ಮಣ್ಣವರ, ಮಲ್ಲಿಕಾರ್ಜುನ ಡೊಂಗರಗಾವಿ, ಶಂಕರ ಢವಳಿ, ಶೇಖರ ಅಕ್ಕಣ್ಣವರ, ಸತ್ಯಪ್ಪಾ ಮಲ್ಯಾಪುರೆ, ಶಿವನಗೌಡ ಗೌಡರ, ಬಸವರಾಜ ತಳವಾರ, ವೀರಭದ್ರ ಕಂಪ್ಲಿ, ಮತಿ ದೊಡ್ಡವ್ವಾ ಪೂಜಾರಿ, ಅಂಗನವಾಡಿ ನೌಕರರ ಸಂಘದ ದಿಲೀಪ ವಾರಕೆ, ಬಬ್ಬಲು ಹಾಗೂ ಎಪಿಎಂಸಿ ವರ್ತಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು. ರೈತ, ಕಾರ್ಮಿಕ, ದಲಿತ, ಮಹಿಳಾ, ವಿದ್ಯಾರ್ಥಿ, ಯುವಜನ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು, ಸದಸ್ಯರು ಇದ್ದರು.