ಬೆಳಗಾವಿಯ ಆಟೋ ನಗರದ ಕಣಬರ್ಗಿ ಕೈಗಾರಿಕಾ ಪ್ರದೇಶದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಅಪಾರ ಸೊತ್ತು ಬೆಂಕಿಗಾಹುತಿಯಾದ ಘಟನೆ ಶನಿವಾರ ರಾತ್ರಿ ನಡೆದಿದೆ.
ಪ್ರದೀಪ್ ಇಂಡಸ್ಟ್ರಿಯಲ್ ಪ್ಯಾಕರ್ಸ್ ಎಂಬ ಸಂಸ್ಥೆಯಲ್ಲಿ ಶನಿವಾರ ರಾತ್ರಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ.
ಇದನ್ನು ಓದಿದ್ದೀರಾ? ಕೊಪ್ಪಳ | ಸಿಎಂ ಬರುವ ದಾರಿಯಲ್ಲಿ ವಿರುದ್ಧ ದಿಕ್ಕಿಗೆ ಸಾಗಿದ ಜನಾರ್ದನ ರೆಡ್ಡಿ ಕಾರು : ತಪ್ಪಿದ ಅನಾಹುತ
ಶನಿವಾರ ರಾತ್ರಿ10.45ರ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಶಾಮಕ ದಳ ಆಗಮಿಸಿ ಬೆಂಕಿಯನ್ನು ಶಮನಗೊಳಿಸಿದೆ. ಘಟನೆಯ ಬಗ್ಗೆ ಮತ್ತು ಅಗ್ನಿ ಅವಘಡದಿಂದ ಆಗಿರುವ ನಷ್ಟದ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದು ಬಂದಿಲ್ಲ.
