ಬೆಳಗಾವಿ ಫ್ಲೈ ಓವರ್ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಯವರು ʼದೇವರು ವರ ಕೊಟ್ಟರೂ ಪೂಜಾರಿ ಕೊಡ್ತಿಲ್ಲʼವೆಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯದ ಸ್ಮಾರ್ಟ್ ಸಿಟಿಗಳಲ್ಲಿ ಬೆಳಗಾವಿ ನಗರವೂ ಒಂದಾಗಿದೆ. ಆದರೆ ಬೆಳಗಾವಿ ನಗರದಲ್ಲಿ ಈವರೆಗೂ ಇಲ್ಲಿ ಫ್ಲೈ ಓವರ್ ಆಗಿಲ್ಲ. ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಬೆಳಗಾವಿ ಪ್ಲೈ ಓವರ್‌ಗೆ ಒಪ್ಪಿಗೆ ಕೊಟ್ಟಿದ್ದಾರೆ. ಆದರೆ ಬೆಳಗಾವಿ ಬಿಜೆಪಿ ನಾಯಕರು ಸಹಕಾರ ನೀಡುತ್ತಿಲ್ಲ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಆನ್‌ಲೈನ್ ಖರೀದಿ ಮೂಲಕ ಅಮೆಜಾನ್ ಕಂಪೆನಿಗೆ ₹11.45 ಲಕ್ಷ ವಂಚನೆ; ಇಬ್ಬರ ಬಂಧನ
“ಪ್ಲೈ ಓವರ್‌ಗೆ ದೇವರು ವರ ಕೊಟ್ಟರೂ ಪೂಜಾರಿ ಕೊಡುತ್ತಿಲ್ಲ, ಪೂಜಾರಿ ಮಂಗಳಾರತಿ ಮಾಡಿಲ್ಲ, ಗಂಟೆ ಬಾರಿಸಿಲ್ಲ. ಆದರೂ ಬೆಳಗಾವಿಯಲ್ಲಿ ಪ್ಲೈ ಓವರ್ ನಿರ್ಮಾಣವಾಗಲಿದೆ” ಎಂದು ಹೇಳಿದ್ದಾರೆ