ಮಹಾಲಕ್ಷ್ಮೀ ಅರ್ಬನ್ ಕೋ ಆಪರೇಟೀವ್ ಕ್ರೆಡಿಟ್ ಬ್ಯಾಂಕ್‌ನಲ್ಲಿ ₹74.87 ಕೋಟಿ ವಂಚನೆಯ ಆರೋಪಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನಿಂದ ಮೋಸ ಹೋದವರ ಹಣ ಮರಳಿ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ರಮೇಶ್ ಜಾರಕಿಹೊಳಿ ಭರವಸೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಮಹಾಲಕ್ಷ್ಮೀ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, “ಬಾಳಾಸಾಹೇಬ ಮಾಂಗಳೇಕರ ಮತ್ತು ಆಡಳಿತ ಮಂಡಳಿ ಈ ವಂಚನೆಯ ಪ್ರಕರಣದಲ್ಲಿ ಶಾಮೀಲಾಗಿಲ್ಲ. ಪೊಲೀಸರು ಹಂತ ಹಂತವಾಗಿ ತನಿಖೆ ನಡೆಸಿ ಈ ಪ್ರಕರಣವನ್ನು ಸರಿಪಡಿಸುತ್ತಾರೆ. ನನ್ನ ಮೇಲೆ ನಂಬಿಕೆ ಇಟ್ಟು, ನನಗೆ ಸಹಕಾರ ನೀಡಿ ಮುಂಬರುವ 3ರಿಂದ 6 ತಿಂಗಳಲ್ಲಿ ಇದನ್ನು ಸರಿಪಡಿಸುತ್ತೇನೆ. ಯಾರು ಹಗರಣ ಮಾಡಿದ್ದಾರೆ ಅವರು ಆಸ್ತಿ ಹರಾಜು ಮಾಡಿ ನಿಮ್ಮ ಹಣವನ್ನು ವಾಪಾಸು ಮಾಡುತ್ತೇವೆ. ನನ್ನ ಹಿರಿಯ ಮಗನ ಹಣವೂ ಈ ಬ್ಯಾಂಕ್‌ನಲ್ಲದೆ. ನೀವು ಸಹಕಾರಾ ನೀಡಿ ನಿಮ್ಮ ಹಣ, ನೀವು ಉಳಿಯಬೇಕು. ಕೆಲವರು ಬೆಂಕಿ ಹಚ್ಚುವ ಕಾರ್ಯ ಮಾಡುತ್ತಾರೆ. ಅದಕ್ಕೆ ತಲೆಕೊಡದೆ ಸಹಕಾರ ನೀಡಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ರಸ್ತೆಯಲ್ಲಿ ರಾರಾಜಿಸುತ್ತಿರುವ ತಗ್ಗು ಗುಂಡಿಗಳು; ದುರಸ್ತಿಗೆ ಸ್ತಳೀಯರ ಆಗ್ರಹ
“ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬ್ಯಾಂಕ್‌ನಿಂದ ಮೋಸ ಆದಾಗ ರಾಜಕಾರಣಿಗಳು ಅಧಿಕಾರಿಗಳು ಸಭೆ ಮಾಡಿ ಜನರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.