ಬೆಳಗಾವಿ | ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾರ; ವಿಡಿಯೊ ತೋರಿಸಿ ಬೆದರಿಸುತ್ತಿದ್ದ ಆರೋಪಿಗಳ ಬಂಧನ

Date:

Advertisements

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಅತ್ಯಾಚಾರದ ವಿಡಿಯೊ ಚಿತ್ರೀಕರಿಸಿಕೊಂಡು ಬೆದರಿಸುತ್ತಿದ್ದ ಮೂವರು ಆರೋಪಿಗಳ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

“ಅಭಿಷೇಕ ದೇವನೂರು, ಆದಿಲ್ ಶಾ ಬಂಧಿತ ಆರೋಪಿಗಳು. ಇನ್ನೊಬ್ಬ ಅರೋಪಿ ಕೌತುಬ್ ಬಾಬುಸಾಬ್‌ ಬಡಿಗೇರ ತಲೆಮರೆಸಿಕೊಂಡಿದ್ದಾನೆ. ಮೂವರ ಮೇಲೂ ಪೋಕ್ಸೊ ಅಡಿ ಪ್ರಕರಣ ದಾಖಲಿಸಲಾಗಿದೆ” ಎಂದು ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಬುಧವಾರ ತಿಳಿಸಿದ್ದಾರೆ.

“ಇಬ್ಬರೂ ಯುವತಿಯರು ಜಿಲ್ಲೆಯ ಕಾಲೇಜೊಂದರಲ್ಲಿ ಪಿಯುಸಿ(17 ವರ್ಷದ ಇಬ್ಬರು ಯುವತಿಯರು) ಓದುತ್ತಿದ್ದಾರೆ. ಅಭಿಷೇಕ ದೇವನೂರು ಎಂಬಾತ ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿ ಒಬ್ಬ ಯುವತಿಯ ಪರಿಚಯ ಮಾಡಿಕೊಂಡಿದ್ದ. ಸಂದೇಶಗಳಿಗೆ ಪ್ರತಿಕ್ರಿಯೆ ನೀಡಿದ ಯುವತಿ ಆರೋಪಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಳು. ಜನವರಿ 3ರಂದು ಅಥಣಿ ತಾಲೂಕಿನ ಕೊಕಟನೂರು ಜಾತ್ರೆಯಲ್ಲಿ ಇಬ್ಬರೂ ಪರಸ್ಪರ ಭೇಟಿಯಾಗಿ
ಪರಿಚಯ ಮಾಡಿಕೊಂಡಿದ್ದರು. ಎರಡನೇ ಭೇಟಿಯಲ್ಲಿ ಯುವತಿಯನ್ನು ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಹೋಗಿಬರುವುದಾಗಿ ಅಭಿಷೇಕ ಆಹ್ವಾನಿಸಿದ್ದ. ಆಗ ಯುವತಿ ತನ್ನ ಸಹಪಾಠಿಯಾದ ಇನ್ನೊಬ್ಬ ಯುವತಿಯನ್ನೂ ಕರೆದಕೊಂಡು ಬಂದಿದ್ದಳು” ಎಂದು ತಿಳಿಸಿದ್ದಾರೆ.

Advertisements

ಅಭಿಷೇಕ ಕೂಡ ತನ್ನ ಇಬ್ಬರು ಸ್ನೇಹಿತರಾದ ಆದಿಲ್ ಶಾ ಮತ್ತು ಕೌತುಕ್‌ನನ್ನು ಕರೆದುಕೊಂಡು ಬಂದಿದ್ದ. ಕಾರೊಂದರಲ್ಲಿ ಎಲ್ಲರೂ ಪ್ರಯಾಣ ಬೆಳೆಸಿದ್ದರು.

“ಮೂವರು ಯುವಕರು ಯುವತಿಯರನ್ನು ಸವದತ್ತಿ ಹೊರವಲಯದ ಗುಡ್ಡಗಾಡು ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು. ಗುಡ್ಡದಲ್ಲಿ ಅಭಿಷೇಕ ಹಾಗೂ ಆದಿಲ್ ಶಾ ಸೇರಿಕೊಂಡು ಒಬ್ಬ ಯುವತಿ ಮೇಲೆ ಅತ್ಯಾಚಾರ ಎಸಗಿದ್ದು, ಕೌತುಬ್‌ ಎಂಬಾತ ಇನ್ನೊಬ್ಬ ಕಾರಿನಲ್ಲಿ ಇನ್ನೊಬ್ಬ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ” ಎಂದರು.

ಈ ಸುದ್ದಿ ಓದಿದ್ದೀರಾ? ಉದ್ಯೋಗ ಮಾಹಿತಿ | ವೈದ್ಯಕೀಯ ವಿಭಾಗದ ಪ್ರೊಫೆಸರ್ ಹುದ್ದೆಗಳಿಗೆ ನೇಮಕಾತಿ; ಅರ್ಜಿ ಸಲ್ಲಿಸಲು ಜ.30 ಕೊನೆಯ ದಿನ

“ಅತ್ಯಾಚಾರ ಮಾಡಿದ ಸಂದರ್ಭದ ಪ್ರತಿ ಕ್ಷಣಗಳನ್ನೂ ಯುವಕರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ವಿಡಿಯೊಗಳನ್ನು ಇಟ್ಟುಕೊಂಡು ಪದೇಪದೆ ತಮ್ಮೊಂದಿಗೆ ಬರುವಂತೆ ಬೆದರಿಕೆ ಒಡ್ಡಲು ಶುರು ಮಾಡಿದ್ದರು. ʼಮುಂದಿನ ವಾರ ಎಲ್ಲರೂ ಸೇರಿ ಗೋವಾಗೆ ಹೋಗೋಣ, ಬರದೇ ಇದ್ದರೆ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇವೆʼ ಎಂದು ಬ್ಲ್ಯಾಕ್‌ಮೇಲ್‌ ಮಾಡಿದ್ದು, ಇದರಿಂದ ಹೆದರಿದ ಒಬ್ಬ ಯುವತಿ ಜನವರಿ 13ರಂದು ಹಾರೂಗೇರಿ ಠಾಣೆಯಲ್ಲಿ ದೂರು ದಾಖಲಿಸಿದರು. ಬಳಿಕ ಪ್ರಕರಣ ಗೊತ್ತಾಗಿದೆ” ಎಂದು ಎಸ್‌ಪಿ ತಿಳಿಸಿದರು.

“ಅತ್ಯಾಚಾರ ಹಾಗೂ ವಿಡಿಯೊ ಮಾಡಿಕೊಂಡ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುತ್ತೇವೆಂದು ಯುವತಿಯರನ್ನು ಹೆದರಿಸಿದ್ದರು. ಹೀಗಾಗಿ, ಯುವತಿ ತಡವಾಗಿ ದೂರು ನೀಡಿದ್ದಾರೆ” ಎಂದು ವಿವರಿಸಿದರು. ಇನ್ನೊಬ್ಬನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X