ಭಾರೀ ಮಳೆಗಾಳಿಗೆ ಸರ್ಕಾರಿ ಶಾಲೆ ಹೆಂಚುಗಳು ಹಾರಿಹೋಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ನಡೆದಿದೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಟಾವಣಿ ಹಾರಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಾಲೆಯಲ್ಲಿರದಿರುವ ಕಾರಣ ಅನಾಹುತ ತಪ್ಪಿದೆ.
ವಿದ್ಯಾರ್ಥಿಗಳು ಶಾಲೆ ಮುಗಿಸಿ ಮನೆಗೆ ಹೋದ ಮೇಲೆ ಸಂಜೆ ಮಳೆ ಗಾಳಿ ಆರಂಭವಾಗಿತ್ತು. ಈ ಹಿನದನೆಲೆಯಲ್ಲಿ ಶಾಲೆಯ ಹೆಂಚುಗಳು, ಹಾಗೂ ತಗಡಿನ ಮೇಲ್ಛಾವಣಿ ಹಾರಿಹೋಗಿ ಶಾಲಾ ಮುಂಬಾಗದಲ್ಲಿ ಬಿದ್ದಿವೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ ನಗರದ ಮಳಿಗೆಗಳಿಗೆ ಶೇ.60ರಷ್ಟು ಕನ್ನಡ ನಾಮಫಲಕ ಕಡ್ಡಾಯ: ನೂತನ ಆಯುಕ್ತೆ ಶುಭ ಬಿ
ವಿಧ್ಯಾರ್ಥಿಗಳು ಶಾಲೆಯಲ್ಲಿ ಇಲ್ಲದಿರುವುದರಿಂದ ಆಗಬಹುದಾದ ಅನಾಹುತ ತಪ್ಪಿದೆ. ಕಳಪೆ ಕಾಮಗಾರಿಯಿಂದ ಶಾಲೆಯ ಮೇಲ್ಟಾವಣಿ ಹಾರಿ ಹೋಗಿರುವ ಶಂಕೆ ವ್ಯಕ್ತವಾಗಿದೆ.