ಜಗದೀಶ್ ಶೆಟ್ಟರ್ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡರ ವಿರೋಧದ ನಡುವೆಯೂ ಬಿಜೆಪಿ ಟಿಕೆಟ್ ಪಡೆದು ಬೆಳಗಾವಿ ಲೋಕಸಭಾ ಸಂಸದರಾಗಿದ್ದಾರೆ. ಇವರು 2012 ಮತ್ತು 2013ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೂ ಬೆಳಗಾವಿಗೆ ಅನ್ಯಾಯ ಮಾಡಿದ್ದರು. ಈಗಲೂ ಸಂಸದರಾಗಿಯೂ ಕೂಡ ಬೆಳಗಾವಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಜಿಲ್ಲೆಯ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಬೆಳಗಾವಿಗೆ ಬರಬೇಕಿದ್ದ ಹೈಕೋರ್ಟ್ ಪೀಠವನ್ನು ವಿರೋಧ ಮಾಡಿ ಧಾರವಾಡಕ್ಕೆ ಆಗುವಂತೆ ನೋಡಿಕೊಂಡಿದ್ದರು. ಆ ಸಂದರ್ಭದಲ್ಲಿಯೂ ಬೆಳಗಾವಿ ಜಿಲ್ಲೆಯ ಜನರಿಂದ ಆಕ್ರೋಶ ವ್ಯಕ್ತವಾಗಿತ್ತು.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಧಾರವಾಡದವರೆಗೆ ಮಾತ್ರವೇ ಇತ್ತು. ನಂತರ ಬೆಳಗಾವಿಗೂ ವಂದೇ ಭಾರತ್ ರೈಲು ಸಂಚಾರವನ್ನು ವಿಸ್ತರಿಸಬೇಕೆಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಜನಪ್ರತಿನಿಧಿಗಳ ಒತ್ತಾಯಕ್ಕೆ ರೈಲ್ವೆ ಇಲಾಖೆ ಮಣಿಯಿತು. ರೈಲು ಸೇವೆಯನ್ನು ಬೆಳಗಾವಿಗೆ ವಿಸ್ತರಣೆ ಮಾಡಲಾಗುತ್ತದೆಂದು ಘೋಷಣೆ ಮಾಡಿತು. 2024ರ ನವೆಂಬರ್‌ನಲ್ಲಿ ಬೆಂಗಳೂರು-ಬೆಳಗಾವಿ ನಡುವಿನ ಪ್ರಾಯೋಗಿಕ ಸಂಚಾರವೂ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಧಾರವಾಡದಿಂದ ಬೆಳಗಾವಿವರೆಗೆ ಲೋಂಡಾ ಪ್ರದೇಶದಲ್ಲಿ ಹೆಚ್ಚು ತಿರುವುಗಳಿರುವುದರಿಂದ ವೇಗದ ಸಂಚಾರ ಅಸಾಧ್ಯವೆಂಬ ಕಾರಣ ನೀಡಲಾಗಿತ್ತು.
ಆದರೆ, ಈಗ ಇದೇ ಮಾರ್ಗದಲ್ಲಿ ಪುಣೆಯಿಂದ ಬೆಳಗಾವಿ, ಬೆಳಗಾವಿಯಿಂದ ಹುಬ್ಬಳ್ಳಿಗೆ ವಂದೇ ಭಾರತ್ ರೈಲು ಸಂಚರಿಸಲು ಗ್ರೀನ್ ಸಿಗ್ನಲ್ ನೀಡಲಾಗಿದೆ. ಈ ರೈಲಿಗೆ ಆ ತಿರುವುಗಳು ಅಡ್ಡಿಯಾಗುವುದಿಲ್ಲ ಏಕೆ ಎಂಬುದು ಬೆಳಗಾವಿ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಬಿಜೆಪಿಯಿಂದ ಬೆಳಗಾವಿ ಲೋಕಸಭಾ ಟಿಕೆಟ್ ನೀಡಿದಾಗಲೂ ಇದೇ ಕಾರಣಕ್ಕೆ ʼಗೋ ಬ್ಯಾಕ್ ಜಗದೀಶ್ ಶೆಟ್ಟರ್ ಬೆಳಗಾವಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೇಕು, ಜಗದೀಶ್ ಶೆಟ್ಟರ್ ಬೇಡʼವೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವನ್ನೂ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಿಎಂ ಬದಲಾವಣೆ ಪರಿಸ್ಥಿತಿ ಬಂದರೆ ನಾನೂ ಸಿಎಂ ಆಕಾಂಕ್ಷಿ: ಶಾಮನೂರು ಶಿವಶಂಕರಪ್ಪ
ಈ ಕುರಿತು ಸ್ವಾಭಿಮಾನಿ ಶೇತಕರಿ ರೈತ ಸಂಘಟನೆಯ ಮುಖಂಡರಾದ ಶಿವಲೀಲಾ ಮಿಸಾಳೆಯವರು ಈ ದಿನ.ಕಾಮ್ ಜೊತೆ ಮಾತನಾಡಿ, “ನಮ್ಮ ಜಿಲ್ಲೆಯ ಮೊದಲ ಬೇಡಿಕೆ ಧಾರವಾಡದಿಂದ ಬೆಳಗಾವಿಗೆ ವಂದೇ ಭಾರತ್ ರೈಲು ಸಂಚಾರ ಆಗಿಬೇಕಿತ್ತು. ಆದರೆ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯ ಲಾಭಕ್ಕಾಗಿ ಪೂನಾದಿಂದ ಬೆಳಗಾವಿಗೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಿದೆ. ಇದರಲ್ಲಿ ಜಿಲ್ಲೆಯ ಜನರ ಹಿತಾಸಕ್ತಿ ಏನಿಲ್ಲ” ಎಂದು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ವಿಷಯದಲ್ಲಿ ಕೇಂದ್ರ ಸರ್ಕಾರದ ಅನ್ಯಾಯ ಧೋರಣೆ ಏಕೆ ಎಂಬ ಪ್ರಶ್ನೆಗೆ ಜಗದೀಶ್ ಶೆಟ್ಟರ್ ಮತ್ತು ಕೇಂದ್ರ ಸರ್ಕಾರ ಉತ್ತರಿಸಬೇಕಿದೆ

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು
ದೀರ್ಘ ಕಾಲದ ಅಧಿಕಾರದಲ್ಲಿ ಇದ್ದರೂ ಉತ್ತರ ಕರ್ನಾಟಕಕ್ಕೆ ವಿಶೇಷವಾಗಿ ಹುಬ್ಬಳ್ಳಿ ಧಾರವಾಡ ಗಳಿಗೆ ಇವರ ಕೊಡುಗೆ ಭಾಳಾ ಕಮ್ಮಿ,, ಸಮುದಾಯದ ಪರವಾಗಿ ಸಹ ನಿಲ್ಲದವರು,, ತಮ್ಮ ಅಭಿವೃದ್ಧಿ ಮಾಡಿಕೊಳ್ಳಲು ಹಿಂದೆ ಬಿದ್ದಿಲ್ಲ,,, ಎಲ್ಲಕ್ಕಿಂತ ಹೆಚ್ಚಾಗಿ ಅವರ ಪಕ್ಷದಲ್ಲಿ ಗಟ್ಟಿಯಾಗಿ ಮಾತಾಡುವ ಅವಕಾಶವೂ ಇಲ್ಲ ಧೈರ್ಯವೂ ಇಲ್ಲ
Yes sir
ಜಗದೀಶ ಶೆಟ್ಟರ ಗಟ್ಟಿಯಾಗಿ ಮಾತನಾಡುವ ವ್ಯಕ್ತಿ ಅಲ್ಲ ಒಂದೇ ಭಾರತ ಅಲ್ಲದೆ ಧಾರವಾಡ ಬೆಳಗಾವಿ ನೇರ ರೈಲು ಮಾರ್ಗಕ್ಕೆ ಈ ವರ್ಷ ಬಜೆಟ್ಟಿನಲ್ಲಿ ಬರೀ 20 ಕೋಟಿ ಮಾತ್ರ ಇಟ್ಟಿದ್ದಾರೆ ಅದಕ್ಕೂ ಧ್ವನಿ ಎತ್ತುವುದಿಲ್ಲ ಮಹಾದಾಯಿ ವಿಚಾರದಲ್ಲೂ ಅನ್ಯಾಯ ಈ ಪ್ರಹ್ಲಾದ ಜೋಷಿ ಮೋದಿ ಜೊತೆ ಇದ್ದು ನಮಗೆ ಬರಬೇಕಾದ ನೀರನ್ನು ತರಲು ಆಗುತ್ತಿಲ್ಲ ಬರೀ ಮಾತು ಕೇಳಿ