ಬೆಳಗಾವಿ ಜಿಲ್ಲೆಯ ಕಿತ್ತೂರು ಚೆನ್ನಮ್ಮ ಕೋಟೆ ಆವರಣದಲ್ಲಿ ಕಿತ್ತೂರು ಉತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಭಜನೆ ಸ್ಪರ್ಧೆಯಲ್ಲಿ ಭಜನಾ ಕಲಾವಿದ ಹೃದಯಾಘಾತದಿಂದ ನಿಧನರಾಗಿರುವ ಘಟನೆ ನಡೆದಿದೆ.
ಕಿತ್ತೂರು ತಾಲೂಕಿನ ಬಸಾಪುರ-ಶೀಗಿಹಳ್ಳಿಯ ಭಜನಾ ತಂಡದ ಸದಸ್ಯ ಈರಪ್ಪ ಫಕ್ಕೀರಪ್ಪ ಬಬ್ಲಿ(48) ಮೃತಪಟ್ಟವರು. ಅವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ ಎಂದು ತಿಳಿದುಬಂದಿದೆ.
ಕಿತ್ತೂರು ಉತ್ಸವ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಾನುವಾರ ಆಯೋಜಿಸಿದ್ದ ಭಜನಾ ಸ್ಪರ್ಧೆಯಲ್ಲಿ ಭಜನಾ ಕಲಾವಿದ ಈರಪ್ಪ ಫಕ್ಕೀರಪ್ಪ ಬಬ್ಲಿ ತಮ್ಮ ತಂಡದೊಂದಿಗೆ ಭಾಗಿಯಾಗಿದ್ದರು.
ಈ ಸುದ್ದಿ ಓದಿದ್ದೀರಾ? ತುರುವೇಕೆರೆ | ಸರೋಜಿನಿ ಮಹಿಷಿ ವರದಿ ಅನುಷ್ಠಾನಗೊಳಿಸಲು ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಆಗ್ರಹ
“ಹಾಡು ಮುಗಿದ ನಂತರ ಕೈಯಲ್ಲಿ ಹಿಡಿದಿದ್ದ ತಾಳದೊಂದಿಗೆ ಇಳಿಯುತ್ತಿದ್ದಾಗ ವೇದಿಕೆಯಲ್ಲಿಯೇ ಕುಸಿದು ಬಿದ್ದರು. ಕೂಡಲೇ ನೋಡುವಷ್ಟರಲ್ಲಿ ಅಲ್ಲಿಯೇ ಅವರು ಉಸಿರು ಚೆಲ್ಲಿದ್ದರು” ಎಂದು ಸ್ಥಳದಲ್ಲಿಯೇ ಇದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.