ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು, ಭಜನಾ ಮಂಡಳಿ ಯವರು, ಕರಡಿ ಮಜಲುದವರು ಗ್ರಾಮಕ್ಕೆ ಬಂದ ಕಿತ್ತೂರು ರಾಣಿ ಚೆನ್ನಮ್ಮ ವೀರಜ್ಯೋತಿಯನ್ನು ಸ್ವಾಗತ ಮಾಡಿಕೊಂಡರು.
ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕರು ಹಾಗೂ ಆಶಾ ಕಾರ್ಯಕರ್ತರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಲ್ಪನಾ ಡೊಂಕನ್ನವರ ಉಪಾಧ್ಯಕ್ಷರು ಸದಸ್ಯರು ಸಿಬ್ಬಂದಿಗಳು ಗ್ರಾಮದ ಲೆಕ್ಕಾಧಿಕಾರಿಗಳು ಹಾಗೂ ಊರಿನ ಎಲ್ಲಾ ಗ್ರಾಮಸ್ಥರು ಉಪಸ್ಥಿತರಿದ್ದರು.
ನಂತರ ವೀರ ಜ್ಯೋತಿಗೆ ಗ್ರಾಮ ದೇವಿ ಮಂದಿರದವರೆಗೆ ಬಂದು, ಬಳಿಕ ನಾವಲಗಟ್ಟಿ ಗ್ರಾಮಕ್ಕೆ ಬೀಳ್ಳೊಡಲಾಯಿತು.