ವಾಟ್ಸ್ಯಾಪ್ ಸ್ಟೇಟಸ್‌ಗೆ ಪ್ರಿಯಕರ ತನ್ನ ಫೋಟೋ ಹಾಕಿದ ಕಾರಣ ವಿವಾಹಿತ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ ಗ್ರಾಮದಲ್ಲಿ ನಡೆದಿದೆ.
ಪ್ರಿಯಕರ ತನ್ನ ಫೋಟೋವನ್ನು ವಾಟ್ಸ್ಯಾಪ್ ಸ್ಟೇಟಸ್‌ಗೆ ಹಾಕಿದ ಕಾರಣಕ್ಕೆ ಆರತಿ ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈಕೆ ಪ್ರಶಾಂತ ಕಾಂಬಳೆ ಎಂಬುವವರೊಂದಿಗೆ ಮದುವೆಯಾಗಿದ್ದರು. ಆದರೆ ಆರತಿಯವರಿಗೆ ಅದೇ ಊರಿನ ಸಾಗರ ಕಾಂಬಳೆ ಜೊತೆ ಸ್ನೇಹವಿದ್ದು, ಸಾಗರ್ ತನ್ನ ವಾಟ್ಸ್ಯಾಪ್ ಸ್ಟೇಟಸ್‌ನಲ್ಲಿ ತನ್ನ ಪ್ರೇಯಸಿ ಆರತಿ ಪೋಟೋ ಸ್ಟೇಟಸ್ ಹಾಕಿದ್ದಾನೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಚಾರ್ಜ್‌ಶೀಟ್‌ನಿಂದ ಹೆಸರು ಕೈಬಿಡಲು ಲಂಚ ಸ್ವೀಕಾರ; ಲೋಕಾಯುಕ್ತ ಬಲೆಗೆ ಬಿದ್ದ ಎಎಸ್ಐ
ತನ್ನ ಪೋಟೋವನ್ನು ಸಾಗರ್ ಸ್ಟೇಟಸ್‌ನಲ್ಲಿ ನೋಡಿದ ಕೂಡಲೇ ಆರತಿ ಎಂಬಾಕೆ ಆತ್ಮಹತ್ಯೆಗೆ ನಿರ್ಧಾರ ಕೈಗೊಂಡಿದ್ದು, ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದ ಸಂಬಂಧಿಕರ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಸ್ಥಳಕ್ಕೆ ರಾಯಬಾಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
