ಬೆಳಗಾವಿ ಜಿಲ್ಲೆಗೆ ಇಂದು ಪೂರ್ವ ಆಫ್ರಿಕಾದ ರುವಾಂಡಾ ದೇಶದ ಹೈಕಮೀಷನರ್ ಜಾಕ್ವೆಲಿನ್ ಮುಕಂಜಿರಾ ಆಗಮಿಸಿ ನಗರದ ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡಿದರು.
ಜಾಕ್ವೆಲಿನ್ ಸುವರ್ಣಸೌಧಕ್ಕೆ ಜಾಕ್ವೆಲಿನ್ ಭೇಟಿ ನೀಡಿದ ವೇಳೆ, ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರು ಸ್ವಾಗತಿಸಿ, ಅವರೊಟ್ಟಿಗೆ ಬೆಳಗಾವಿ ಸುವರ್ಣ ವಿಧಾನಸೌಧದ ವಿಧಾನಸಭೆ, ವಿಧಾನ ಪರಿಷತ್ ಸಭಾಂಗಣ, ಸೆಂಟ್ರಲ್, ಸಮಿತಿ ಸಭಾಂಗಣ, ಸಚಿವ ಸಂಪುಟ ಸಭಾಂಗಣವನ್ನು ವೀಕ್ಷಿಸಿದರು.
ವಿಧಾನಸಭೆ ಹಾಗೂ ವಿಧಾನ ಪರಿಷತ್ ಕಾರ್ಯಚಟುವಟಿಕೆಗಳು ಮತ್ತು ಸುವರ್ಣವಿಧಾನಸೌಧದ ವಿಧಾನಮಂಡಲದ ಚಳಿಗಾಲ ಅಧಿವೇಶನ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರು ರುವಾಂಡೊ ದೇಶದ ಹೈಕಮಿಷನರ್ ಜಾಕ್ವೆಲಿನ್ ಅವರಿಗೆ ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಮುಖ್ಯಮಂತ್ರಿ ಹುದ್ದೆ ಕುರಿತು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ; ರಾಜಕೀಯ ವಲಯದಲ್ಲಿ ಕುತೂಹಲ
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಅಪರ ಜಿಲ್ಲಾಧಿಕಾರಿ ವಿಜಯ್‌ಕುಮಾರ್ ಹೊನಕೇರಿ, ಉತ್ತರ ವಲಯದ ಮುಖ್ಯ ಎಂಜಿನಿಯರ್ ಎಚ್ ಸುರೇಶ್, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್ ಸೊಬರದ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರವೀಣ ಹುಲಜಿ ಸೇರಿದಂತೆ ಇತರರು ಇದ್ದರು.