ಬೆಳಗಾವಿ ಜಿಲ್ಲೆಯ ಹಲಗಾ ಗ್ರಾಮದ ಸರ್ವೀಸ್ ರಸ್ತೆ ಬದಿಯಲ್ಲಿರುವ ಈದ್ಗಾ ರಸ್ತೆಯಲ್ಲಿ ಗಾಂಜಾ ಮಾರಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹಿರೇಬಾಗೇವಾಡಿ ಠಾಣೆ ಪೊಲೀಸರು ದಾಳಿ ಮಾಡಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುಮಾರು ₹22,000 ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗಾಂಜಾ ಮಾರಾಟ ಮಾಡುತ್ತಿದ್ದ
ಪಿರಾಜಿ ಯಲ್ಲಪ್ಪ ಯೆಸೂಚೆ ಎಂಬ ಆರೋಪಿಯನ್ನು ಪೋಲಿಸರು ಬಂಧಿಸಿದ್ದು, ಪ್ರಕರಣ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ದಲಿತರ ಜಮೀನುಗಳಲ್ಲಿ ರಸ್ತೆ ನಿರ್ಮಾಣ; ಕಾಮಗಾರಿ ಸ್ಥಗಿತಕ್ಕೆ ಛಲವಾದಿ ನಾರಾಯಣಸ್ವಾಮಿ ಸೂಚನೆ
ದಾಳಿಯಲ್ಲಿ ಪಾಲ್ಗೊಂಡ ಹಿರೇಬಾಗೆವಾಡಿ ಪೊಲೀಸ್ ಠಾಣೆಯ ಪಿಐ ಟಿ ಬಿ ನೀಲಗಾರ ಮತ್ತು ಅರುಣ ಕಾಂಬ್ಳೆ, ಬಾಳಪ್ಪ ಗುನ್ನಗೋಳ, ಮಹಾಂತೇಶ ಹೂಗಾರ, ಯಲ್ಲಾಲಿಂಗ ಮಾಳ್ಯಾಗೋಳ, ಯಲ್ಲಪ್ಪ ಮುನವಳ್ಳಿ, ರೇವಣಸಿದ್ದ ತಳೆವಾಡ ಅವರಿದ್ದ ಪೋಲಿಸ್ ತಂಡಕ್ಕೆ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.