ಬೆಳಗಾವಿ | ನವಜಾತ ಶಿಶುವನ್ನು ಬಿಸಾಡಿದ್ದ ಪ್ರಕರಣ; ಪ್ರೇಮಿಗಳ ವಿರುದ್ಧ ಕೊಲೆ ಪ್ರಕರಣ ದಾಖಲು

Date:

Advertisements

ನವಜಾತ ಶಿಶುವನ್ನು ತಿಪ್ಪೆಗುಂಡಿ ಬಳಿ ಬಿಸಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊದಲ ಬಾರಿಗೆ ಪ್ರೇಮಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಹಾಬಳೇಶ ಕಾಮೋಜಿ ಹಾಗೂ ಸಿಮ್ರಾನ್​ ಮಾಣಿಕಬಾಯಿ ಬಂಧಿತರು ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದ ಅನೇಕ ಕಡೆ ನವಜಾತ ಶಿಶುಗಳ ಪತ್ತೆ ಪ್ರಕರಣಗಳು ನಿರಂತರವಾಗಿ ಬೆಳಕಿಗೆ ಬರುತ್ತಿದ್ದು, ಹೆತ್ತವರೇ ತಿಪ್ಪೆಗುಂಡಿ, ರಸ್ತೆ ಹಾಗೂ ನಿರ್ಜನ ಪ್ರದೇಶದಲ್ಲಿ ಶಿಶುಗಳನ್ನು ಬಿಸಾಡಿ ಹೋಗುತ್ತಿದ್ದಾರೆ. ಇದೇ ರೀತಿ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಮನೆಯೊಂದರ ಪಕ್ಕದ ತಿಪ್ಪೆಗುಂಡಿಯಲ್ಲಿ ಇದೇ ಮಾರ್ಚ್‌ 5ರಂದು ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿತ್ತು.

Advertisements

“ಅಂಬಡಗಟ್ಟಿ ಗ್ರಾಮದ ಮಹಾಬಳೇಶ ಕಾಮೋಜಿ ಹಾಗೂ ಸಿಮ್ರಾನ್​ ಮಾಣಿಕಬಾಯಿ ಎಂಬ ಯುವಕ, ಯುವತಿ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಸ್ವಲ್ಪ ದಿನದಲ್ಲಿಯೇ ಸಲುಗೆ ಬೆಳೆದಿದ್ದು, ಇಬ್ಬರೂ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಕಳೆದ ವರ್ಷ ಸಿಮ್ರಾನ್​ ಗರ್ಭಿಣಿಯಾಗಿದ್ದು, ಆಕೆ ದಪ್ಪ ಇದ್ದಿದ್ದರಿಂದ ಈ ವಿಚಾರ ಯಾರಿಗೂ ಗೊತ್ತಾಗಿರಲಿಲ್ಲ. ಮಾರ್ಚ್ 5ರಂದು ಸಿಮ್ರಾನ್​ಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮನೆಯ ಬಾತ್​ ರೂಂನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ಯಾರಿಗೂ ಗೊತ್ತಾಗದ ರೀತಿಯಲ್ಲಿ ಮಗುವನ್ನು ತಿಪ್ಪೆಗುಂಡಿಯ ಬಳಿ ಬಿಸಾಡಲಾಗಿತ್ತು. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಕಿತ್ತೂರು ಪೊಲೀಸರು ಈ ಬಗ್ಗೆ ತನಿಖೆ ಶುರು ಮಾಡಿದ್ದರು” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌ ಡಾ.ಭೀಮಾಶಂಕರ ಗುಳೇದ ಮಾಧ್ಯಮಗಳಿಗೆ ತಿಳಿಸಿದ್ದಾರೆ.

“ನವಜಾತ ಶಿಶುವಿನ ತಲೆಗೆ ಗಾಯವಾಗಿ, ಮೃತಪಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿಯೂ ಈ ಬಗ್ಗೆ ವೈದ್ಯರು ಉಲ್ಲೇಖಿಸಿದ್ದರು. ಪ್ರಕರಣ ಬೆನ್ನಟ್ಟಿದ ಪೊಲೀಸರು ಅಕ್ಕಪಕ್ಕದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಗರ್ಭಿಣಿಯರು ಚಿಕಿತ್ಸೆ ಪಡೆದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಬಳಿಕ ಅನುಮಾನದ ಮೇಲೆ ಸಿಮ್ರಾನ್​ನನ್ನು​ ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಬಯಲಾಗಿದೆ” ಎಂದರು.

“ಕಳೆದ ಐದಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಸಿಮ್ರಾನ್​ ಹಾಗೂ ಮಹಾಬಳೇಶ ಮಗುವಿಗೆ ಜನ್ಮ ನೀಡಿದ್ದರು. ಇಬ್ಬರು ಅಂಬಡಗಟ್ಟಿಯ ಒಂದೇ ಓಣಿಯ ನಿವಾಸಿಗಳಿದ್ದಾರೆ. ಜತೆಗೆ ಬೇರೆ ಬೇರೆ ಧರ್ಮೀಯರಾಗಿರುವ ಕಾರಣ ಕೃತ್ಯವನ್ನು ಮುಚ್ಚಿಡಲು ಯತ್ನಿಸಿದ್ದರು. ಇದು ಯಾರಿಗೂ ಗೊತ್ತಾಗಬಾರದೆಂದು ಈ ರೀತಿ ಮಾಡಿದ್ದರು. ಹೆರಿಗೆ ಸಂದರ್ಭದಲ್ಲಿ ಸಿಮ್ರಾನ್‌, ಮಹಾಬಳೇಶ್ ಜತೆಗೆ ವಿಡಿಯೋ ಕಾಲ್​ನಲ್ಲಿ ಮಾತನಾಡಿದ್ದರು” ಎಂದು ಮಾಹಿತಿ ನೀಡಿದರು.

ರಾಜ್ಯದ ಅನೇಕ ಕಡೆಗಳಲ್ಲಿ ನವಜಾತ ಶಿಶುಗಳು ಪತ್ತೆ ಆಗುತ್ತವೆ. ಆದದೆ ಇದಕ್ಕೆ ಯಾವುದೇ ತಾರ್ಕಿಕ ಅಂತ್ಯ ಸಿಗುವುದಿಲ್ಲ. ಆದರೆ, ಅಂಬಡಗಟ್ಟಿ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರ ಮೇಲೆ ಕೊಲೆ ಪ್ರಕರಣವನ್ನೂ ದಾಖಲು ಮಾಡಿದ್ದಾರೆ. ಇದೀಗ ಇಬ್ಬರನ್ನೂ ಜೈಲಿಗೆ ಕಳುಹಿಸಲಾಗಿದೆ” ಎಂದು ತಿಳಿಸಿದರು.‌

ಈ ಸುದ್ದಿ ಓದಿದ್ದೀರಾ? ವಿಜಯಪುರ | ‌ʼಶೋಷಣೆ ರಹಿತ ಸಮಾಜದ ಕನಸು ಕಂಡಿದ್ದವರು ಭಗತ್‌ಸಿಂಗ್ʼ

“ಇನ್ನೆರೆಡು ತಿಂಗಳಲ್ಲಿ ಸಿಮ್ರಾನ್​ ಮದುವೆ ಮಾಡಲು ಪೋಷಕರು ತಯಾರಿ ನಡೆಸಿದ್ದರು ಎನ್ನುವುದು ಗೊತ್ತಾಗಿದೆ. ಇಬ್ಬರೂ ಪ್ರೀತಿಸುತ್ತಿದ್ದರು. ದೈಹಿಕ ಸಂಪರ್ಕ ಬೆಳೆಸಿದ್ದು, ಅವರ ಸ್ವಇಚ್ಛೆ. ಆದರೆ, ಪ್ರಪಂಚವನ್ನೇ ನೋಡದಿರುವ ಶಿಶುವನ್ನು ಧಾರುಣವಾಗಿ ಹತ್ಯೆ ಮಾಡಿದ್ದು ಮಾತ್ರ ಮಹಾಪಾಪ. ಇಂಥ ಪ್ರಕರಣಗಳಲ್ಲಿ ಸಾಮಾನ್ಯವಾಗಿ ತಾಯಿ ಪತ್ತೆ ಹಚ್ಚುವುದು ಬಹಳ ಕಷ್ಟ. ಆದರೆ, ಕಿತ್ತೂರು ಪೊಲೀಸರು ತುಂಬಾ ಶ್ರಮವಹಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಇದು ದುರಾದೃಷ್ಟ ಪ್ರಕರಣವಾದರೂ ಕೂಡ ಆ ಮುಗ್ದ ಮಗುವಿನ ಸಾವಿಗೆ ಪೊಲೀಸರು ನ್ಯಾಯ ಒದಗಿಸಿದ್ದಾರೆ” ಎಂದು ಡಾ.ಭೀಮಾಶಂಕರ ಗುಳೇದ ಮೆಚ್ಚುಗೆ ವ್ಯಕ್ತಪಡಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X