ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಅಕ್ಕತಂಗೇರಹಾಳ್ ಗ್ರಾಮದ ಪ್ರತಿಭಾವಂತ ಕರಾಟೆ ಪಟು, ವೈಷ್ಣವಿಯವರಿಗೆ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಸ್ವರ್ಣ ಪದಕ ಲಭಿಸಿದೆ.
ಅಕ್ಕತಂಗೇರಹಾಳ್ ಗ್ರಾಮದ ಪ್ರತಿಭಾವಂತ ಕರಾಟೆ ಪಟು, 16 ವರ್ಷದ ವೈಷ್ಣವಿ ಶಿವನಗೌಡಾ ನಿರ್ವಾಣಿ ಎಂಬುವವರು ರಷ್ಯಾದ ಉಜಕಿಸ್ಥಾನದಲ್ಲಿ ಮಂಗಳವಾರ ಜರುಗಿದ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಮೂಲಕ ಬಾಲಕಿಯರ ವೀರಾಗ್ರಣಿ ಕರಾಟೆ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಸ್ವರ್ಣ ಪದಕ ಪಡೆದಿದ್ದಾರೆ.
ವರ್ಲ್ಡ್ ಜೀತ್ ಕುನೆದೊ ಚ್ಯಾಂಪಿಯನ್ ಶಿಪ್ ಕರಾಟೆ ಸ್ಪರ್ಧೆ ಇದಾಗಿದ್ದು, ತನ್ನ ನೆಚ್ಚಿನ ಹವ್ಯಾಸವಾಗಿಸಿಕೊಂಡು, ಈ ಕ್ಷೇತ್ರದಲ್ಲಿ ಅಗಾಧ ಸಾಧನೆ ತನ್ನದಾಗಬೇಕೆಂಬುದು ಕನಸು ಕಂಡಿದ್ದರು. ಈ ದಿಸೆಯಲ್ಲಿ ಹಗಲಿರುಳು ಶ್ರಮಿಸಿ ಈಗ ವಿಶ್ವ ಕರಾಟೆ ಬಾಲಕಿಯರ ವೀರಾಗ್ರಣಿ ಸ್ಪರ್ಧೆಯಲ್ಲಿ ಸ್ವರ್ಣ ಪದಕ ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಕೀಲರ ಮೇಲೆ ಹಲ್ಲೆ; ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಗೃಹ ಸಚಿವರಿಗೆ ಮನವಿ
ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿರುವ ವೈಷ್ಣವಿಯವರು, “ಈ ಸಾಧನೆಯಿಂದ ಅತ್ಯಂತ ಖುಷಿಯಾಗಿದೆ” ಎಂದು ಸಂತಸ ಹಂಚಿಕೊಂಡಿದ್ದಾರೆ.