ಮನುಷ್ಯನಿಗೆ ಸಮಯ ಪ್ರಜ್ಞೆ ಇಲ್ಲ, ಭಾರತ ಪ್ರಕಾಶಿಸುತ್ತಿದೆ ಎಂದುಕೊಂಡಿದ್ದೇವೆ. ಆದರೆ ಭಾರತ ಪ್ರಕಾಶಿಸುತ್ತಿಲ್ಲ ಎಂದು ಪಿಎಸ್‌ಐ ಭಿಮಾಶಂಕರ ಗುಳೆದವರು ಹೇಳಿದರು.
ಬೆಳಗಾವಿಯ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಸ್ಪಂದನಾ ಸಂಸ್ಥೆ, ಪೋಲಿಸ್ ಇಲಾಖೆಯ ಸಹಯೋಗದಲ್ಲಿ ಮಾನವ ಕಳ್ಳಸಾಗಾಣಿಕೆ ಹಾಗೂ ಜೀತ ಕಾರ್ಮಿಕ ಪದ್ಧತಿ ತಡೆಗಟ್ಟುವ ಕುರಿತು ನಡೆದ ಜಿಲ್ಲಾಮಟ್ಟದ ಕಾರ್ಯಗಾರದಲ್ಲಿ ಮಾತನಾಡಿದರು.
“ನಮ್ಮ ಪೊಲೀಸ್ ಇಲಾಖೆಯಲ್ಲಿ ನಿತ್ಯವೂ ದೌರ್ಜನ್ಯಕ್ಕೊಳಗಾದ ಪ್ರಕರಣಗಳನ್ನು ನೋಡುತ್ತಿರುತ್ತೇವೆ. ಅವುಗಳನ್ನು ತಡೆಯಲು ನಾವೂ ಕೂಡ ಪ್ರಯತ್ನ ಮಾಡುತ್ತೇವೆ. ಆದರೂ ಕೂಡ ದೌರ್ಜನ್ಯಗಳು ನಿಲ್ಲುತ್ತಿಲ್ಲ. ಯಾಕೆಂದರೆ ಹಿರಿಯರ ಬುದ್ಧಿ ಮಾತುಗಳನ್ನು ಅಪರಾಧಿಗಳು ಕೇಳುತ್ತಿಲ್ಲ. ಭಾರತದಲ್ಲಿ ಶೇ.95 ರಷ್ಟು ಶಿಕ್ಷಣವಂತರಿದ್ಧಾರೆ. ಪೋಲಿಸ ಇಲಾಖೆ ಮತ್ತು ನಾವುಗಳೆಲ್ಲರೂ ಸೇರಿ ಮಾನವ ಕಳ್ಳಸಾಗಾಣಿಕೆ ಮತ್ತು ಜೀತಪದ್ಧತಿ ನಿಲ್ಲಿಸೋಣ” ಎಂದು ಹೇಳಿದರು.
ನ್ಯಾಯವಾದಿ ಮತ್ತು ಸಾಮಾಜಿಕ ಹೋರಾಟಗಾರ ಬಿ ಎಲ್ ಪಾಟಿಲ್ ಮಾತನಾಡಿ, “ಸಂಘ ಸಂಸ್ಥೆಗಳು ಮಾನವ ಕಳ್ಳಸಾಗಾಣಿಕೆ ಮತ್ತು ಜೀತಪದ್ಧತಿ ಹಾಗೂ ಲೈಂಗಿಕ ಶೋಷಣೆಯ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದ್ದು, ಆ ಸಂದರ್ಭದಲ್ಲಿ ಪೊಲೀಸ್ ಇಲಾಖೆಯೂ ಸಹಾಯ ಮಾಡಬೇಕು” ಎಂದು ಮನವಿ ಮಾಡಿದರು.
ಸ್ಪಂದನಾ ಸಂಸ್ಥೆಯ ವಿ ಸುಶೀಲಾ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಈವರೆಗೆ ನಡೆದಿರುವ ಜೀತಪದ್ಧತಿ ಮತ್ತು ಅದರಿಂದ ಕಾರ್ಮಿಕರಿಗಾದ ತೊಂದರೆಗಳು ಹಾಗೂ ಮಾನವ ಕಳ್ಳಸಾಗಣಿಕೆಯ ಕುರಿತಾಗಿ ಪೂರ್ಣವಾಗಿ ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ರೆಡಿಮೇಡ್ ಬಟ್ಟೆ ಕಂಪನಿಗೆ ದಂಡ ವಿಧಿಸಿದ ಗ್ರಾಹಕರ ಆಯೋಗ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಿವಿಲ್ ನ್ಯಾಯಧೀಶರು ಮಾತನಾಡಿ, “ಮಾನವ ಕಳ್ಳಸಾಗಾಣಿಕೆ ಮತ್ತು ಜೀತಪದ್ಧತಿ ತಡೆಯಲು ನಾವೂ ಕೂಡ ಮುಂದಾಗೋಣ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಅಧಿಕಾರಿಗಳು ಇದ್ದರು.