ಮದುವೆ ಖುಷಿಯಲ್ಲಿದ್ದ ಯುವಕನನ್ನು ಕ್ಷುಲ್ಲಕ ಕಾರಣಕ್ಕೆ ಆತನ ತಂದೆ ಹಾಗೂ ಸಹೋದರ ಸೇರಿ ಹತ್ಯೆಗೈದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಚಿಕ್ಕನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಂಜುನಾಥ್ ಉಳ್ಳಾಗಡ್ಡಿ(25) ಎಂಬಾತ ಅಣ್ಣ ಮತ್ತು ತಂದೆಯಿಂದಲೇ ಕೊಲೆಯಾದ ದುರ್ದೈವಿ.
ಇದೇ ಮಾರ್ಚ್ 12ರಂದು ಮಂಜುನಾಥನ ಮದುವೆ ನಿಶ್ವಯವಾಗಿತ್ತು. ಹೀಗಾಗಿ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ತಮ್ಮನ ಮದುವೆಗೆಂದು ಸೇನೆಯಲ್ಲಿದ್ದ ಅಣ್ಣ ಕೂಡಾ ಊರಿಗೆ ಬಂದಿದ್ದ. ಆದರೆ, ಮದುವೆಯಾಗಬೇಕಿದ್ದ ಮಂಜುನಾಥನೇ ಕೊಲೆಯಾಗಿದ್ದಾನೆ. ಹೀಗಾಗಿ ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ಮನನೊಂದು ಮನೆ ತೊರೆದಿದ್ದ ತಾಯಿ, ರಕ್ಷಿಸಲ್ಪಟ್ಟ ಮಹಿಳೆ ಮಕ್ಕಳ ವಶಕ್ಕೆ
ನಿನ್ನೆ ರಾತ್ರಿ ಮಂಜುನಾಥ್ ಮದ್ಯ ಕುಡಿದು ಬಂದು ಗಲಾಟೆ ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದ್ದು, ನಾಗಪ್ಪ, ಗುರುಬಸಪ್ಪ ಸೇರಿಕೊಂಡು ಕಲ್ಲು ಮತ್ತು ಇಟ್ಟಿಗೆಯಿಂದ ಹೊಡೆದಿದ್ದಾರೆ. ಇದರ ಪರಿಣಾಮ ಮಂಜುನಾಥ್ ಮೃತಪಟ್ಟಿದ್ದಾನೆ.