ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲಿ ನೀರು ಕುಡಿಯಲು ಹೋಗಿ ಮಾರ್ಕಂಡೇಯ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆಯಾದ ನಡೆದಿದೆ.
ಗೋಕಾಕ ನಗರದ ಮಾರ್ಕಂಡೇಯ ನದಿ ತೀರದ ಹೆಜ್ಜೆಗಾರ ಹೊಲದ ಹತ್ತಿರ ಭಾನುವಾರ ಮಧ್ಯಾಹ್ನ ನೀರು ಕುಡಿಯಲು ಹೋಗಿದ್ದ ಸಾಗರ ಗೌಳಿ(16) ಎಂಬ ಯುವಕ ಕಾಲುಜಾರಿ ಬಿದ್ದು ಹರಿಯುತ್ತಿರುವ ನದಿಯಲ್ಲಿ ಕೊಚ್ಚಿ ಹೊಗಿದ್ದನು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಒಳಮೀಸಲಾತಿ ಜಾರಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು: ದಲಿತ ಮುಖಂಡ ಪ್ರದೀಪ್ ಕಲಗುದ್ರಿ
ಯುವಕ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ಯುವಕನಿಗಾಗಿ ಅಗ್ನಿಶಾಮಕದಳ ಹಾಗೂ ಎಸ್‌ಡಿಆರ್‌ಎಫ್ ತಂಡ ಹುಡುಕಾಟ ನಡೆಸಿತ್ತು. ತೀವ್ರ ತಪಾಸಣೆ ನಂತರ ಯುವಕನ ಮೃತದೇಹ ಪತ್ತೆಯಾಗಿದೆ.