ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ನೂಲಿ ಚಂದಯ್ಯನವರ ಜಯಂತಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, “ಶರಣರು ಮತ್ತು ಮಹಾನಾಯಕರ ಜಯಂತಿಗಳು ಒಂದೇ ವರ್ಗಕ್ಕೆ ಸೀಮಿತವಾಗಬಾರದು” ಎಂದು ಅಭಿಪ್ರಾಯಿಸಿದರು.
“ಪ್ರಸ್ತುತ ದಿನಗಳಲ್ಲಿ ಯುವಜನರು ಗುಣಾತ್ಮಕ ಶಿಕ್ಷಣ ಪಡೆಯಬೇಕು. ಜತೆಗೆ, ಸಮಾಜದಲ್ಲಿ ಸಾಮರಸ್ಯದಿಂದ ಬಾಳಬೇಕು. ಶರಣರು, ಮಹಾನ್ ನಾಯಕರ ಜಯಂತಿಗಳು ಒಂದೇ ವರ್ಗಕ್ಕೆ ಸೀಮಿತವಾಗಬಾರದು. ಬದಲಿಗೆ, ಇಡೀ ಸಮಾಜಕ್ಕೆ ಮಾದರಿಯಾಗುವಂತೆ ಅವುಗಳನ್ನು ಆಚರಿಸಬೇಕು” ಎಂದರು.
ಸಂಪನ್ಮೂಲ ವ್ಯಕ್ತಿ ಪ್ರೊ.ವೈ.ಎಂ.ಭಜಂತ್ರಿ ಮಾತನಾಡಿ, ” 12ನೇ ಶತಮಾನದಲ್ಲಿ ಬಸವೇಶ್ವರರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ನುಲಿ ಚಂದಯ್ಯನವರು ಶ್ರೇಷ್ಠ ವಚನಕಾರರಾಗಿದ್ದರು. ತಮ್ಮ ವಚನಗಳಲ್ಲಿ ಕಾಯಕ ಮತ್ತು ದಾಸೋಹಕ್ಕೆ ಅವರು ಒತ್ತು ಕೊಟ್ಟಿದ್ದರು. ಹಗ್ಗ ಮಾರುವ ಕಾಯಕವನ್ನು ನಿಷ್ಠೆ, ಪ್ರಾಮಾಣಿಕತೆಯಿಂದ ಮಾಡಿ ಬಸವಣ್ಣನವರ ಮೆಚ್ಚುಗೆಗೆ ಪಾತ್ರವಾಗಿದ್ದರು” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಧಾರವಾಡ | ಸಿಎಂ ಸಿದ್ಧರಾಮಯ್ಯ ರಾಜೀನಾಮೆ ವಿಚಾರ ಅವರ ಪಕ್ಷಕ್ಕೆ ಬಿಟ್ಟಿದ್ದು: ಎಸ್ ಆರ್ ಹಿರೇಮಠ್
ರಾಚಿ ಭಜಂತ್ರಿ, ಮಲ್ಲಪ್ಪ ಭಜಂತ್ರಿ, ಶಂಕರ ಭಜಂತ್ರಿ, ಮುತ್ತಪ್ಪ ಭಜಂತ್ರಿ, ರಾಜು ಭಜಂತ್ರಿ, ರಾಮಜಿ ಭಜಂತ್ರಿ, ಬಸವರಾಜ ಭಜಂತ್ರಿ, ಅಶೋಕ ಸುಳೇಭಾವಿ ಉಪಸ್ಥಿತರಿದ್ದರು. ಇದಕ್ಕೂ ಮುನ್ನ, ಅಶೋಕ ವೃತ್ತದಿಂದ ಕುಮಾರ ಗಂಧರ್ವ ರಂಗಮಂದಿರದವರೆಗೆ ಜಾನಪದ ಕಲಾತಂಡಗಳ ಮೆರವಣಿಗೆ ನಡೆಯಿತು.
