ಬೆಳಗಾವಿ ಜಿಲ್ಲೆಯಲ್ಲಿ ನಕಲಿ ನೋಟು ಜಾಲವನ್ನು ಭೇದಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಗೋಕಾಕ ಬೆಳಗಾವಿ ರಸ್ತೆಯ ಕಡಬಗಟ್ಟಿ ಗ್ರಾಮದ ಮೂಲಕ ಸಾಗುವ ರಸ್ತೆಯಲ್ಲಿ ಕೋಟಾ ನೋಟು ಸಾಗುತ್ತಿದ್ದ ವೇಳೆ ಕಾರೊಂದನ್ನು ತಪಾಸಣೆ ಮಾಡಿದಾಗ ₹100 ಹಾಗೂ ₹500 ರ ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿದ್ದು, ಐವರು ಆರೋಪಿ ಆರೋಪಿಗಳನ್ನು ಬಂಧಿಸಿದ್ದಾರೆ.
ಗಸ್ತು ಪೊಲೀಸರು ನಡೆಸುತ್ತಿದ್ದ ಪೊಲೀಸರು ಕಾರೊಂದನ್ನು ತಪಾಸಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. 100 ಹಾಗೂ 500 ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿವೆ. ಆರೋಪಿಗಳ ಬಳಿ 500 ರೂಪಾಯಿ ಮುಖ ಬೆಲೆಯ 6 ಸಾವಿರದ 792 ನಕಲಿ ನೋಟುಗಳು ಪತ್ತೆಯಾಗಿವೆ.
ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಗಳು ಮಹಾಲಿಂಗಪುರದ ಸದ್ದಾಂ ಮೂಸಾ ಯಡಹಳ್ಳಿ, ರವಿ ಚನ್ನಪ್ಪ ಹ್ಯಾಗಡಿ, ದುಂಡಪ್ಪ ಮಹಾದೇವ ವನಶೆಣವಿ ಮತ್ತು ವಿಠ್ಠಲ ಹಣಮಂತ ಹೊಸಕೋಟಿ, ಮೂಡಲಗಿ ತಾಲೂಕಿನ ಅರಭಾವಿಯ ಅನ್ವರ್ ಮೊಹಮ್ಮದ್ ಸಲೀಂ ಯಾದವಾಡ ಎಂದು ಗುರುತಿಸಲಾಗಿದೆ.
ನಕಲಿ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್, “ಆರೋಪಿಗಳು ಖೋಟಾ ನೋಟು ಪ್ರಿಂಟ್ ಮಾಡಿ ಚಲಾವಣೆ ಮಾಡುತ್ತಿದ್ದರು ಹಾಗೂ ದುಪ್ಪಟ್ಟು ಹಣ ನೀಡುವ ಆಸೆ ತೋರಿಸಿ ವಹಿವಾಟು ನಡೆಸುತ್ತಿದ್ದರು. ಜಿಲ್ಲೆಯ ಹಲವೆಡೆ ಅಸಲಿ ನೋಟು ಎಂದು ನಂಬಿಸಿ ಮೋಸ ಮಾಡುತ್ತಿದ್ದರು” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ರೋಬೊಟ್ ಆತ್ಮಹತ್ಯೆ | ‘ಸು ಅಂದ್ರೆ ಸುಕ್ರುಂಡೆ’ ಅನ್ನುವ ನಮ್ಮ ಡೀಯರ್ ಮೀಡಿಯಾ!
ಖೋಟಾ ನೋಟು ಸಾಗಿಸುತ್ತಿದ್ದ ಆರೋಪಿಗಳಿಂದ ಪ್ರಿಂಟ್ ತೆಗೆಯಲು ಉಪಯೋಗಿಸುತ್ತಿದ್ದ ಕಂಪ್ಯೂಟರ್, ಸಿಪಿಯು, ಪ್ರಿಂಟರ್ ಮಷಿನ್, ಸ್ಕ್ರೀನಿಂಗ್ ಬೋರ್ಡ್, ಪೈಂಟ್, ಶೈನಿಂಗ್, ಡಿಕೋಟಿಂಗ್ ಪೌಡರ್, ಪ್ರಿಂಟಿಂಗ್ ಪೇಪರ್, ಆರು ಮೊಬೈಲ್, ಒಂದು ಬಿಳಿ ಬಣ್ಣದ ಕಾರು ಸೇರಿದಂತೆ ಸುಮಾರು 5,23,900 ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
