ಇಬ್ಬರು ಸಹೋದರರ ನಡುವೆ ಮಾರಾಮಾರಿ ಗಲಾಟೆ ನಡೆದಿದ್ದು, ಓರ್ವ ಮೃತಪಟ್ಟಿದ್ದರೆ, ಮತ್ತೋರ್ವ ತೀವ್ರವಾಗಿ ಗಾಯಗೊಂಡ ಘಟನೆ ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದಲ್ಲಿ ನಡೆದಿದೆ.
ಸುಶಾಂತ ಸುಭಾಷ್ ಪಾಟೀಲ(20) ಮೃತ ಯುವಕನಾಗಿದ್ದು, ಇವರ ಅಣ್ಣ ಓಂಕಾರ ಸುಭಾಷ್ ಪಾಟೀಲ(23) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬೆಳಗಾವಿ | ಶಾಸಕರ ಪೋಟೊ ಕಿತ್ತು ಹಾಕಿದ್ದ ಶಿಕ್ಷಕರ ಕುರಿತು ಶಾಸಕ ಅಶೋಕ ಪಟ್ಟಣ ಬೇಸರ
ಚಿಕ್ಕ ವಯಸ್ಸಿನಲ್ಲಿಯೇ ಇಬ್ಬರಿಗೂ ಗಾಂಜಾ ಸೇವಿಸುವ ಚಟ ಅಂಟಿಕೊಂಡಿತ್ತು ಎನ್ನಲಾಗಿದೆ. ಇಬ್ಬರಿಗೂ ತಂದೆ-ತಾಯಿ ಬುದ್ದಿಮಾತು ಹೇಳಿ ಮನೆ ಕೆಲಸ ನೋಡಿಕೊಳ್ಳುವಂತೆ ಸೂಚಿಸಿದ್ದರು. ಆದರೆ ತಡರಾತ್ರಿ ಇಬ್ಬರ ನಡುವೆ ಜಗಳ ನಡೆದು ಇಬ್ಬರೂ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಸ್ಥಳಕ್ಕೆ ಮಾರಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
