ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ ವತಿಯಿಂದ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ದಲಿತ ಸಂಘಟನೆ ಮುಖಂಡರಾದ ಚಂದ್ರಕಾಂತ ಕಾದ್ರೋಳಿಯವರು ಮಾತನಾಡಿ, ಒಳ ಮೀಸಲಾತಿ ಜಾರಿಗಾಗಿ ಅಕ್ಟೋಬರ್ 2ಕ್ಕೆ ಅಂತಿಮ ಗಡುವು ನೀಡಲಾಗಿದೆ. ಅಲ್ಲಿಯವರೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೋದಲ್ಲಿ ಬಂದಲ್ಲಿ ಒಳಮೀಸಲಾತಿಗಾಗಿ ಆಗ್ರಹಸಬೇಕು ಎಂದು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ರಾಜ್ಯದಾದ್ಯಂತ ಪ್ರವಾಸ ಮಾಡಲು ತಯಾರಾಗಿದ್ದು. ಸೆ.29ರಂದು ಹುಬ್ಬಳ್ಳಿ ಸೇರಿದಂತೆ 7 ಜಿಲ್ಲೆಗಳಲ್ಲಿ ಒಳಮೀಸಲಾತಿ ಹೋರಾಟದ ಮುಖಂಡರ ಜೊತೆಗೆ ಸಂವಾದ ಮತ್ತು ಮುಂದಿನ ಹೋರಾಟದ ರೂಪುರೇಷೆ ಸಿದ್ಧವಾಗಲಿದೆ. ಅಕ್ಟೋಬರ್ 10ರಂದು ರಾಜ್ಯದಾದ್ಯಂತ ಪಂಜಿನ ಮೆರವಣಿಗೆಗೆ ಕರೆ ಕೊಡಲಾಗಿದೆ. ಬೆಳಗಾವಿಯಿಂದ ರಾಜಧಾನಿ ಬೆಂಗಳೂರು ನಗರದವರೆಗೆ ಪಾದಯಾತ್ರೆ ಮತ್ತು ವಿಧಾನಸೌದದಿಂದ ಸುವರ್ಣಸೌಧದವರೆಗೆ ಹೋರಾಟಕ್ಕೆ ತಯಾರಿ ನಡೆಸಿದ್ದೇವೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಚಿಕ್ಕಬಳ್ಳಾಪುರ | ಪ್ರತಿಭಟನೆಯಲ್ಲಿ ರೈತನ ಎಮ್ಮೆ ಎಳೆದು ತಂದು ಪುಂಡಾಟ ಪ್ರದರ್ಶಿಸಿದ ಬಿಜೆಪಿಗರು
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಮಿಲಿಂದ ಐಹೊಳಿ, ಸಂತೋಷ ಗುಡ್ಡಪ್ಪನವರ, ಬಾಳವ್ವ ಹರಿಜನ, ಸುಧಾಕರ ಡೊಂಕನ್ನವರ ಉಪಸ್ಥಿತರಿದ್ದರು.
