ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ನಡೆದ ಸಿಪಿಐಎಂ ಪಕ್ಷದ ಜಿಲ್ಲಾ ಸಮ್ಮೆಳನದಲ್ಲಿ ಪಕ್ಷದ ಮುಖಂಡೆ ವರಲಕ್ಷ್ಮೀ ಮಾತನಾಡಿ, ಬಿಜೆಪಿ ಪಕ್ಷವು ಬೆಂಬಲ ಬೆಲೆ ನೀಡದೆ ಕೆವಲ ಕಿಸಾನ್ ಸಮ್ಮಾನ ಯೋಜನೆಯಲ್ಲಿ ರೈತರಿಗೆ ಮೋಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಡಾ.ಸ್ವಾಮಿನಾಥನ ವರದಿಯಂತೆ ರೈತರ ಬೆಳೆಗೆ ಬೆಂಬಲ ಬೆಲೆ ಕೊಡುವುದಾಗಿ ಭರವಸೆ ನೀಡಿದ್ದು, ಇದುವರೆಗೆ ಆ ಭರವಸೆಯನ್ನು ಈಡೆರಿಸಿಲ್ಲ. ರೈತ ಸಮ್ಮಾನ ಯೋಜನೆಯಡಿಯಲ್ಲಿ 6 ತಿಂಗಳಿಗೊಮ್ಮೆ 2000 ರೂಪಾಯಿ ಹಾಕುವ ಭಿಕ್ಷೆ ದುಡ್ಡಿನಲ್ಲಿ ಬದುಕಬೇಕಾ? ಅಥವಾ ಬೆಂಬಲ ಬೆಲೆ ಮೂಲಕ ಸ್ವಾಭಿಮಾನದಿಂದ ಬದುಕಬೇಕಾ? ಎಂದು ಕೆಂದ್ರ ಸರ್ಕಾರವನ್ನು ಪ್ರಶ್ನಿಸಿದರು.
ಬೊಮ್ಮಾಯಿ ಸರ್ಕಾರ ಕೊರೊನಾ ಸಂದರ್ಭದಲ್ಲಿ ಜನರಿಗೆ ಕಳಪೆ ಗುಣಮಟ್ಟದ ಔಷಧಿ ನೀಡುವ ಮೂಲಕ ಜನರು ಹೃದಾಯಘಾತದಿಂದ ಸಾಯುವಂತೆ ಮಾಡಿದ್ದಾರೆ. ಜನರ ಜೀವದ ಜೊತೆ ಆಟವಾಡಿ ಹಣ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೈಬು ಜೈನೆಖಾನ್, ಜಿಲ್ಲಾ ಕಾರ್ಮಿಕ ಮುಖಂಡರು, ದಲಿತ ಮುಂಖಂಡರು, ಕಾರ್ಮಿಕರು ಉಪಸ್ಥಿತರಿದ್ದರು.