ಆಸ್ತಿ ವಿಚಾರವಾಗಿ ಒಂದೇ ಕುಟುಂಬ ಸಹೋದರಿ ಹಾಗೂ ಸಹೋದರರು ಹೊಡೆದಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಸಹೋದರಿ ಲಕ್ಷ್ಮೀ ಭಜಂತ್ರಿ ಹಾಗೂ ತಂಗಿಯ ಮಕ್ಕಳು ಸೇರಿ ಅಣ್ಣಂದಿರು 3 ಎಕರೆ ಆಸ್ತಿಯಲ್ಲಿ ಪಾಲು ನೀಡಿಲ್ಲ ಎಂಬ ಕಾರಣಕ್ಕೆ ಈ ಘಟನೆ ನಡೆದಿದೆ. ಗಲಾಟೆಯಲ್ಲಿ ಶಂಕರ ಭಜಂತ್ರಿ, ಆನಂದ, ಸುಧೀರ್ ಹಾಗೂ ವಜ್ರಮುನಿಗೆ ಗಂಭೀರ ಗಾಯವಾಗಿದ್ದು, ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಾಳುಗಳನ್ನು ಮೀರಜ್ ಆಸ್ಪತ್ರೆಗೆ ಸೇರಿಸಿದ್ದು, ಘಟನೆ ಸಂಬಂಧವಾಗಿ ಅಥಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.