ಸಿ ಟಿ ರವಿ ಅವಾಚ್ಯ ಶಬ್ಧ ಬಳಕೆಯಂತಹ ಘಟನೆಗಳು ದೇಶದಲ್ಲಿ ಹೊಸದಲ್ಲ. ಮತ್ತು ಈ ಘಟನೆ ನಡೆದು ಹೋಗಿದೆ. ಈ ಹಿಂದೆ ಸಂಸತ್ತು ಮತ್ತು ವಿಧಾನಸಭೆಯಲ್ಲೂ ನಡೆದಿವೆ. ಆದ್ಧರಿಂದ ಅದನ್ನು ಮತ್ತೆ ಮುಂದುವರೆಸುವುದು ಅನವಶ್ಯಕ ಎಂದು ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ ತಿಳಿಸಿದರು.
ಸಿ ಟಿ ರವಿ ಅವಾಚ್ಯ ಶಬ್ದ ಬಳಿಸಿಲ್ಲವೆಂದು ಹೇಳುತ್ತಿದ್ದಾರೆ. ಹೀಗಾಗಿ ಈ ಕೇಸ್ ಇಲ್ಲಿಗೆ ಮುಗಿಸದರೆ ಒಳ್ಳೆಯದು. ಬೆಳಗಾವಿ ಸುವರ್ಣಸೌದದಲ್ಲಿ ಇಂತಹ ಪ್ರಕರಣ ಈ ಹಿಂದೆ ಆಗಿರಲ್ಲಿಲ್ಲ. ಕ್ಷಮೆ ಕೇಳಿದ ಬಳಿಕ ಮುಗಿಸೋದು ಒಳ್ಳೆಯದು. ಸಾರ್ವಜನಿಕವಾಗಿ ಈ ಪ್ರಕರಣ ಮುಂದುವರೆಸುವುದು ಅನವಶ್ಯಕ ಎಂದರು.
ಸಿ.ಟಿ ರವಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಖಾನಾಪುರದಿಂದ ಶಿಫ್ಟ್ ಮಾಡಿದ್ದರು. ಸಿ.ಟಿ ರವಿಯನ್ನು ರಾತ್ರಿಯೇ ಕೋರ್ಟ್‌ಗೆ ಹಾಜರು ಮಾಡುವಂತೆ ನಾನು ಪೊಲೀಸರಿಗೆ ಹೇಳಿದ್ದೆ. ಆದರೆ ಯಾರ ನಿರ್ದೇಶನದ ಮೇರೆಗೆ ಸಿ.ಟಿ ರವಿಯನ್ನು ಠಾಣೆಯಿಂದ ಠಾಣೆಗೆ ಸುತ್ತಾಡಿಸಿದ್ದಾರೆ ಎಂಬುದು ನನಗೆ ಗೊತ್ತಿಲ್ಲ.
ಬೆಳಗಾವಿ ಪೊಲೀಸರು ರಾತ್ರಿಯೇ ಕೋರ್ಟ್ ಗೆ ಹಾಜರು ಪಡಿಸಿದ್ದರೆ ಇಷ್ಟೇಲ್ಲ ಆಗುತ್ತಿರಲಿಲ್ಲ. ಸಿ.ಟಿ.ರವಿ ಅವರಿಗೆ ರಕ್ಷಣೆ ನೀಡುವ ಉದ್ದೇಶದಿಂದ ಪೊಲೀಸರು ಅವರನ್ನು ರೌಂಡ್ಸ್ ಹೊಡಿಸಿದ್ದಾರೆ ಎಂಬ ಮಾಹಿತಿಯಿದ್ದು ಇದರಲ್ಲಿ ಬೇರೆ ಯಾವ ಉದ್ದೇಶವೂ ಇಲ್ಲ. ಹೀಗಾಗಿ ಈ ಪ್ರಕರಣ ಮುಂದುವರೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.