ಬೈಲಹೊಂಗಲ ತಾಲೂಕು ಹಳೆ ಜಾಲಿಕೊಪ್ಪ ಗ್ರಾಮದ ಮಲಪ್ರಭಾ ನದಿ ಬಳಿ ಬೈಕ್ ಹಾಗೂ ಬಸ್ ನಡುವೆ ಶುಕ್ರವಾರ ಭೀಕರ ಅಪಘಾತ ಸಂಭವಿಸಿದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ರಾಮಲಿಂಗ ಫಕೀರಪ್ಪ ಶಿಂಗಾಡಿ(40) ಮೃತ ದುರ್ದೈವಿ ಆಗಿದ್ದು, ತಾಲೂಕಿನ ತುರಮರಿ ಗ್ರಾಮದ ನಿವಾಸಿ ಎಂದು ಹೇಳಲಾಗಿದೆ.
ಯಲ್ಲಮ್ಮನ ಗುಡ್ಡದಿಂದ ಬೈಲಹೊಂಗಲ ಕಡೆಗೆ ಬರುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದದ್ದು ಬೈಕ್ ಸವಾರ ರಾಮಲಿಂಗ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೃತ ವ್ಯಕ್ತಿ ಬೈಲಹೊಂಗಲದಿಂದ ತುರುಮರಿ ಗ್ರಾಮಕ್ಕೆ ಆಗಮಿಸುತ್ತಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ ಬೆಳಗಾವಿ | ಖಾನಾಪುರ ಪಶ್ಚಿಮ ಭಾಗದ ಕಾಡಂಚಿನ ರೈತರ ಸಮಸ್ಯೆಗಳಿಗೆ ಸ್ಪಂದಿಸಿ: ಸಿದ್ದಗೌಡ ಮೋದಗಿ
ಬೈಕ್ ಡಿಕ್ಕಿಯಾದ ರಭಸಕ್ಕೆ ಬೈಕ್ ಬಸ್ಸಿನ ಮುಂಭಾಗಕ್ಕೆ ಸಿಲುಕಿತ್ತು. ಬೈಲಹೊಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ಸಂಭವಿಸಿದೆ.