ಸಾಲ ಮರುಪಾವತಿ ಮಾಡದ ಕಾರಣ ಸಾಲ ಕೊಟ್ಟ ಕುಟುಂಬದ ವ್ಯಕ್ತಿ ಜೊತೆಗೆ ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಮದುವೆ ಮಾಡಿಸಿದ ಅಮಾನವೀಯ ಘಟನೆ ಬೆಳಗಾವಿ ನಗರದ ಅನಗೋಳದ ಸಾಯಿ ಕಾಲೋನಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವಡಗಾಂವಿ ಮಂಗಾಯಿ ನಗರದ ವಿಶಾಲ ಪುಂಡಲೀಕ ಡವಳಿ, ಈತನ ತಾಯಿ ರೇಖಾ ಪುಂಡಲೀಕ ಡವಳಿ, ಪುಂಡಲೀಕ ಡವಳಿ, ಶ್ಯಾಮ ಪುಂಡಲೀಕ ಡವಳಿ ಎಂಬುವವರ ವಿರುದ್ಧ ಬಾಲಕಿ ದೂರು ನೀಡಿದ್ದು, ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿಯ ತಾಯಿ ರೇಖಾ ಡವಳಿ ಎಂಬುವರಿಂದ 50 ಸಾವಿರ ರೂ. ಸಾಲ ಪಡೆದಿದ್ದು, ಸಾಲ ಮರು ಪಾವತಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸಾಲ ನೀಡಿದ್ದ ರೇಖಾ ಕಿರುಕುಳ ನೀಡಿದ್ದು, ಸಾಲ ಮರು ಪಾವತಿಸಲು ಆಗದಿದ್ದರೆ, ಬಾಲಕಿಯನ್ನು ಮದುವೆ ಮಾಡಿಕೊಡುವಂತೆ ಬಲವಂತಪಡಿಸಿದ್ದಾಳೆ ಎಂದು ದೂರಿನಲ್ಲಿ ದಾಖಲಾಗಿದೆ.
ವಿಶಾಲ ಮತ್ತು ಅವರ ಕುಟುಂಬವು ಬಾಲಕಿಯನ್ನು ಬಲವಂತವಾಗಿ 2024ರ ಸೆ. 17ರಂದು ವಡಗಾಂವಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಅನಂತರ 2024ರ ಸೆ. 18ರಂದು ಅಥಣಿ ಕಡೆಗೆ ಕರೆದುಕೊಂಡು ಹೋಗಿ ಬಲವಂತವಾಗಿ ಬಾಲಕಿಯನ್ನು ವಿಶಾಲನೊಂದಿಗೆ ವಿವಾಹ ಮಾಡಿಸಿದ್ದಾರೆ ಎಂದು ಗೊತ್ತಾಗಿದೆ.
ಗೋಧಿ ಮಿಡಿಯ ಎಡಿಟಿಂಗ್