ಪತ್ನಿಯನ್ನು ಕೊಲೆಗೈದು ಜಮೀನಿನಲ್ಲಿ ಶವ ಎಸೆದ ಪತಿಯೊಬ್ಬ ಗ್ರಾಮದಲ್ಲೇ ಓಡಾಡಿಕೊಂಡಿದ್ದ ಘಟನೆ ಬೆಳಗಾವಿಯ ಸವದತ್ತಿ ತಾಲೂಕಿನ ಹಿರೂರ ಗ್ರಾಮದಲ್ಲಿ ನಡೆದಿದೆ. 25 ವರ್ಷದ ದಾವಲಬಿ ಕಗದಾಳ ಕೊಲೆಯಾದ ದುರ್ದೈವಿ.
ಹತ್ಯೆ ಮಾಡಿ ಶವವನ್ನು ಕಬ್ಬಿನ ಗದ್ದೆಯಲ್ಲಿ ಬಿಸಾಕಿ ತನಗೆ ಏನೂ ಗೊತ್ತೇ ಇಲ್ಲ ಎಂಬಂತೆ ಆರೋಪಿ ಪತಿ ದಿವಾನ್‌ಸಾಬ್ ಕಗದಾಳ ಬಿಂದಾಸ್ ಆಗಿ ಓಡಾಡಿಕೊಂಡಿದ್ದ. ಮೃತ ಮಹಿಳೆ ಫೋನ್ ರಿಸೀವ್ ಮಾಡದಕ್ಕೆ ಗಲಿಬಿಲಿ ಗೊಂಡ ಮಹಿಳೆಯ ಪೋಷಕರು ಸವದತ್ತಿ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಟ್ ದಾಖಲಿಸಿದ್ದಾರೆ. ಈ ದೂರಿನನ್ವಯ ಸವದತ್ತಿ ಠಾಣೆ ಪೊಲೀಸರು ಮಿಸ್ಸಿಂಗ್ ಕಂಪ್ಲೆಂಟ್ ಬೇಧಿಸಿದ್ದು, ಗಬ್ಬಿನ ಗದ್ದೆಯಲ್ಲಿ ಮಹಿಳೆಯ ಶವ ಪತ್ತೆ ಮಾಡಿದ್ದಾರೆ.

ಕಬ್ಬಿನ ಗದ್ದೆ ಜಮೀನು ಮಾಲೀಕರು ನೀರು ಹಾಯಿಸುವಾಗ ಮಹಿಳೆಯ ಶವ ಪತ್ತೆಯಾಗಿದೆ. ತಕ್ಷಣವೇ ಸವದತ್ತಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಮಹಿಳೆ ಶವದ ಗುರುತು ಪತ್ತೆ ಹಚ್ಚಲಾಗಿದ್ದು, ತಕ್ಷಣವೇ ಆಕೆಯ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುವಾಗ ಆರೋಪಿ ಸತ್ಯ ಬಾಯ್ಬಿಟ್ಟಿದ್ದಾನೆ.
ಇದನ್ನೂ ಓದಿ: ಬೆಳಗಾವಿ |ಆರ್ ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ : ಕಂಬನಿ ಮಿಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್