ಬೆಳಗಾವಿ | ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ʼಪರಿಚಯ ಶಿಬಿರʼ

Date:

ಬೆಳಗಾವಿ ತಾಲೂಕಿನ ಗೋರಮಟ್ಟಿ, ಗೋಡಿಹಳ್ಳ, ನಿಂಗೇನಟ್ಟಿ ಹಳ್ಳಿಯ ಮಕ್ಕಳಿಗಾಗಿ ಅಗಸ್ತ್ಯ ಫೌಂಡೇಷನ್ ಮತ್ತು ಕಾಲ್ಮರಿ ಸ್ಟುಡಿಯೋದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ 14, 15, 16ರಂದು ಮೂರು ದಿನಗಳ ಕಾಲ ಸಂಯೋಜಿಸಿದ ʼಪರಿಚಯ ಶಿಬಿರʼದಲ್ಲಿ ಹತ್ತಾರು ವಿಶೇಷತೆಗಳು ಕಂಡುಬಂದವು.

- Advertisement -

ಶಾಲಾ ಸಮವಸ್ತ್ರದಲ್ಲಿದ್ದ 100ಕ್ಕೂ ಹೆಚ್ಚು ಮಕ್ಕಳು ಅಂಗಳದ ಕಲ್ಲು, ಮಣ್ಣು, ಹುಲ್ಲು, ಎಲೆ, ಕಸಗಳನ್ನು ಆಯ್ದುಕೊಂಡು ಪೇಪರ್ ಮೇಲೆ ಅದ್ಭುತವಾದ ಚಿತ್ತಾರಗಳನ್ನು ಬಿಡಿಸಿದರು. ದುರ್ಬೀನು ಹಾಕಿಕೊಂಡು ಹಕ್ಕಿಗಳನ್ನು ಪರಿಚಯಿಸಿಕೊಂಡರು. ಟೆಲಿಸ್ಕೋಪಿನಿಂದ ನಕ್ಷತ್ರಗಳನ್ನು ನೋಡಿದರು. ಶನಿಗ್ರಹದ ಉಂಗುರ ಕಂಡು ನಲಿದರು. ʼಹಳ್ಳಿಗೋಗುವ ನಾವು ಹಳ್ಳಿಗೋಗುವಾʼ ಎನ್ನುತ್ತ, ಹಾಡುತ್ತ ಹಳ್ಳಿ ಬದುಕಿನ ಸತ್ವವನ್ನು ಸಂಭ್ರಮಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಶ್ಚಿಮ ಪದವೀದರರ ಕ್ಷೇತ್ರ ಸಮರ: ಭದ್ರಕೋಟೆ ಮರುಹಿಡಿಯಲು ಕಾಂಗ್ರೆಸ್...

ಪಶ್ಚಿಮ ಪದವೀದರರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣಾ ಕಾವು ಗರಿಗೆದರಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ನಡುವೆ ಜಿದ್ದಾಜಿದ್ದಿಗೆ ವೇದಿಕೆ ಸಜ್ಜಾಗಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಪಶ್ಚಿಮ ಪದವೀದರರ ಕ್ಷೇತ್ರವೀಗ ಬಿಜೆಪಿಯ...

ಮೀಸಲಾತಿ ಹೆಚ್ಚಳ ಮತ್ತು ನ್ಯಾಯಾಂಗದ ಮಿತಿ: ಸಾಮಾಜಿಕ ನ್ಯಾಯಕ್ಕೆ...

ಮೀಸಲಾತಿ ಬಯಸುವ ಜಾತಿಗಳೆಲ್ಲವೂ ಕೂಡ ವರ್ತಮಾನದ ಸಾಮಾಜಿಕ ಪರಿಸ್ಥಿತಿ ಮತ್ತು ಕಾನೂನು ನಿಯಮಗಳನ್ನು ಸಾಮಾಜಿಕ ನ್ಯಾಯದ ಬೆಳಕಿನಲ್ಲಿ ಅಂತಃಕರಣ ಪೂರ್ವಕವಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾದಾಗ ಮಾತ್ರ ಸಾಮಾಜಿಕ ನ್ಯಾಯವೆಂಬ...

ರಾಮಲೀಲೆಗಳಲ್ಲಿ ರಾಮ, ಹನುಮ, ಲಕ್ಷ್ಮಣ ಪಾತ್ರಗಳಲ್ಲಿ ದಾನಿಶ್ –...

ರಾಮನಾಗಿ ದಾನಿಶ್. ಹನುಮಂತನಾಗಿ ಯೂನುಸ್. ಲಕ್ಷ್ಮಣನಾಗಿ ಶೇರ್ ಖಾನ್. ರಾವಣನಾಗಿ ಇಕ್ಬಾಲ್ ಅಹ್ಮದ್. ಇವರೆಲ್ಲರೂ ಮುಸ್ಲಿಂ ಕಲಾವಿದರು. ಆದರೆ, ಇವರು ಅಭಿನಯಿಸಿರುವುದು ಹಿಂದುಗಳ ಮಹಾಕಾವ್ಯ ರಾಮಾಯಣದ ಪಾತ್ರಗಳಲ್ಲಿ. ಉತ್ತರ ಭಾರತದ ಹಲವು ರಾಮಲೀಲೆಗಳಲ್ಲಿ...

ಕಲಾವಿದರಾದ ವಿಜು, ಸ್ಮೃದುಲ್ ಅವರಿಂದ ಮಣ್ಣಿನ ವಿವಿಧ ಕಲಾಕೃತಿಗಳ ತಯಾರಿ ಹಾಗೂ ಬಣ್ಣಗಳಿಂದ ಪರಿಸರದ ಅಂಶಗಳ ಚಿತ್ತಾರ, ಹೇಮಂತ್, ಸುಧಾಂಶು ಅವರ ಮಾರ್ಗದರ್ಶನದ ಪರಿಸರ ವೀಕ್ಷಣೆಯಿಂದ ಹಕ್ಕಿ, ಕೀಟ, ಹಾವುಗಳ ಪರಿಚಯ ಹಾಗೂ  ಜಾಗೃತಿ, ಸಂಜೆ ಆಕಾಶ ಕಾಯಗಳ ವೀಕ್ಷಣೆ ಮತ್ತು ಛಾಯಾಚಿತ್ರದ ಮೂಲಕ ಪರಿಚಯಮಾಡಿಕೊಟ್ಟರು.

ಮಕ್ಕಳ ಪರಿಚಯ ಶಿಬಿರ 1 1

ಬಿಂದು ರಕ್ಷಿದಿ, ಸುಜಿತ್ ಕಾರ್ಕಳ, ನಾದ, ಶಶಿ ಸಾತ್’ಘಟ್ಟ ಅವರಿಂದ ರಂಗಭೂಮಿ ಚಟುವಟಿಕೆಗಳಿಂದ ಹಾಡು, ನಾಟಕ, ಆಟಗಳು, ಮುಖಕ್ಕೆ ವಿವಿಧ ಬಣ್ಣಗಾರಿಕೆ ಮೂಲಕ ಮಕ್ಕಳ ಸರ್ವತೋಮುಖ ವಿಕಸನದ ಚಟುವಟಿಕೆಗಳು ನಡೆದವು. ಕಲಾವಿದ ಶಿವರಂಜನ್ ಹಾಗೂ ಸಂಸ್ಥೆಯ ನಿರ್ದೇಶಕಿ ಪೂರ್ಣಿಮಾ ಅವರ ಮಾರ್ಗದರ್ಶನದಲ್ಲಿ ದೇಶದ ವಿವಿಧ ಕಡೆಯ ಸಂಪನ್ಮೂಲ ವ್ಯಕ್ತಿಗಳ ಒಗ್ಗೂಡುವಿಕೆಯಲ್ಲಿ ಶಿಬಿರವು ಯಶಸ್ವಿಯಾಗಿ ಸಂಪನ್ನಗೊಂಡಿತು.

ಈ ಸುದ್ದಿ ಓದಿದ್ದೀರಾ? ಬೆಳಗಾವಿ : ರೈಲು ಯೋಜನೆಗಳ ಪರಿಶೀಲನೆ: ಸಂಸದ ಶೆಟ್ಟರ್ ಅಧಿಕಾರಿಗಳೊಂದಿಗೆ ಚರ್ಚೆ

ಆದಿತ್ಯ ಬಿರ್ಲಾ, ಸ್ನೇಹಾಲಯ್ ಅಹಮದಾನಗರ್, ಅಟ್ವಾಸ್ ಫೌಂಡೇಶನ್, ಪಾಲಿ ಹೈಡ್ರೋನ್ ಫೌಂಡೇಶನ್, ಎಕೆಪಿ ಫೌಂಡ್ರಿಸ್ ಮತ್ತು ಸಮುದಾಯದ ಸಹಭಾಗಿತ್ವದೊಂದಿಗೆ ಶಿಬಿರ ಆಯೋಜನೆಗೊಂಡಿತ್ತು.

ಮಕ್ಕಳ ಪರಿಚಯ ಶಿಬಿರ 2
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಂತಾಮಣಿ | ಸಿದ್ದರಾಮಯ್ಯ ವೈಯಕ್ತಿಕ ಚಾರಿತ್ರ್ಯವಧೆ ಮಾಡುವ ಸಣ್ಣತನ ನಮಗಿಲ್ಲ: ಪ್ರತಾಪ್ ಸಿಂಹ

ನಗರದ ಪಾಲಿಟೆಕ್ನಿಕ್ ಮೈದಾನದ ಮಾತಾ ಭಾರತಿ ಮಂಗಳ ಮಂಟಪದಲ್ಲಿ ಆಯೋಜಿಸಿದ್ದ ದಸರಾ...

ಅ.23ರಂದು ‘ಊರೂರೂ ಜಂತರ್ ಮಂತರ್’ ಉಡುಪಿಯಲ್ಲೂ ಪ್ರತಿಭಟನೆ ಮತ್ತು ಜಾಥಾ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು ಹಾಗೂ ಮತದಾರರ...

ಉಡುಪಿಯಲ್ಲಿ ನವೀಕೃತ ಆಭರಣ ಜ್ಯುವೆಲ್ಲರ್ಸ್ ಮಳಿಗೆ ಅ. 21ರಂದು ಪುನರಾರಂಭ

ಉಡುಪಿ ನಗರದ ಸಿಬಿ ರಸ್ತೆಯಲ್ಲಿರುವ ಆಭರಣ ಜ್ಯುವೆಲ್ಲರ್ಸ್‌ನ ಮೂಲ ಮಳಿಗೆಯನ್ನು ಆಧುನಿಕ...

ಉಡುಪಿ | ಉಚ್ಚಿಲ ದಸರಾ ಶೋಭಾಯಾತ್ರೆ: ಅ. 21ರಂದು ವಾಹನ ಸಂಚಾರಕ್ಕೆ ಬದಲಿ ಮಾರ್ಗ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಡುಪಿ-ಉಚ್ಚಿಲ ದಸರಾ 2026ರ ಅಂಗವಾಗಿ...