200ನೇ ಕಿತ್ತೂರು ವಿಜಯೋತ್ಸವದ ನಿಮಿತ್ಯ ಬೆಂಗಳೂರಿನ ಗ್ಲೋಬಲ್ ಸಂಸ್ಥೆ ವತಿಯಿಂದ ರಾಣಿ ಚೆನ್ನಮ್ಮಾಜಿಯ ಐಕ್ಯಸ್ಥಳ ಬೈಲಹೊಂಗಲದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ಆಯೋಜಿಸಿದ್ದು, .
ಗ್ಲೋಬಲ್ ಮೈಕ್ರೈಸ್ ಫೌಂಡೇಶನ್ ಸಂಸ್ಥಾಪಕ ಡಾ. ಮನ್ಮತಯ್ಯ ಸ್ವಾಮಿ ಅವರು ಬೆಳಗಾವಿಯಲ್ಲಿ ಪ್ರಕಟಣೆಗೆ ತಿಳಿಸಿದ್ದು, “ಉದಯೋನ್ಮುಖ ಹಾಗೂ ಪ್ರತಿಭಾವಂತ ಕವಿಗಳಿಂದ ವೀರರಾಣಿ ಕಿತ್ತೂರು ಚನ್ನಮ್ಮ, ಸ್ವಾತಂತ್ರ್ಯ ಹೋರಾಟಗಾರರು, ಕನ್ನಡ ನಾಡು, ನುಡಿ, ಇತಿಹಾಸ, ಸಂಸ್ಕೃತಿ, ಪರಂಪರೆ, ಪರಿಸರ ಪ್ರೇಮ, ರಾಷ್ಟ್ರಪ್ರೇಮ, ಮಾನವೀಯ ಮೌಲ್ಯಗಳು ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಕವನಗಳನ್ನು ಆಹ್ವಾನಿಸಲಾಗಿದೆ” ಎಂದು ತಿಳಿಸಿದ್ದಾರೆ.
“ಕವನ 30 ಸಾಲುಗಳಿಗೆ ಮೀರದಂತೆ ಕಾಗದದ ಒಂದೇ ಮಗ್ಗುಲಲ್ಲಿ ಬರೆದು ಅಥವಾ ಡಿಟಿಪಿ ಮಾಡಿಸಿ ಕಿರುಪರಿಚಯ, ಭಾವಚಿತ್ರ, ಸ್ವವಿಳಾಸ, ವಾಟ್ಸಪ್ ಮೊಬೈಲ್ ಸಂಖ್ಯೆಯೊಂದಿಗೆ ಸೆಪ್ಟೆಂಬರ್ 25ರ ಒಳಗಾಗಿ ಕಳಿಸಬೇಕು” ಎಂದು ಹೇಳಿದ್ದಾರೆ.
ಕವನ ಕಳುಹಿಸುವ ವಿಳಾಸ:
ಮೋಹನ ಬಸನಗೌಡ ಪಾಟೀಲ,
ಮಾಜಿ ಜಿಲ್ಲಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು,
“ಬಸವ ನಿವಾಸ”, ಚನ್ನಮ್ಮನಗರ, ಮೊದಲನೆಯ ಅಡ್ಡರಸ್ತೆ,
ಬೈಲಹೊಂಗಲ- 591102. ಬೆಳಗಾವಿ ಜಿಲ್ಲೆ.
ಈ ವಿಳಾಸಕ್ಕೆ ನೋಂದ ಅಂಚೆ ಮೂಲಕ ಕಳಿಸಬೇಕು.
ಇದನ್ನು ಓದಿದ್ದೀರಾ? ಬೆಳಗಾವಿ | ಮುಖ್ಯಮಂತ್ರಿ ಹುದ್ದೆ ಕುರಿತು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ; ರಾಜಕೀಯ ವಲಯದಲ್ಲಿ ಕುತೂಹಲ
ಹೆಚ್ಚಿನ ಮಾಹಿತಿಗಾಗಿ, ಮೊಬೈಲ್: 9448920888 ಸಂಖ್ಯೆಗೆ ಸಂಪರ್ಕಿಸಬಹುದೆಂದು ಡಾ. ಮನ್ಮತಯ್ಯ ಸ್ವಾಮಿ ತಿಳಿಸಿದ್ದಾರೆ. ಈ ವೇಳೆ ಕಾರ್ಯದರ್ಶಿ ಮಿಥುನ ವಿಠಲ ಹುಗ್ಗಿ ಇದ್ದರು.