ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಆಯೋಜಿಸಿರುವ ಕಿತ್ತೂರು ಉತ್ಸವ ಅಂಗವಾಗಿ ಅಕ್ಟೋಬರ್ ತಿಂಗಳಿನಲ್ಲಿ ಕವಿಗೋಷ್ಠಿ ನಡೆಯಲಿದೆ. ಕವಿಗೋಷ್ಠಿಯಲ್ಲಿ ಕವಿತೆ ವಾಚನ ಮಾಡಲು ಕವಿ-ಕವಯಿತ್ರಿಗಳು ನೋಂದಾಯಿಸಿಕೊಳ್ಳಲು ಕವನ ಆಹ್ವಾನಿಸಲಾಗಿದೆ.
ಈ ಕುರಿತು ಕಸಾಪ ಪತ್ರಿಕಾ ಪ್ರಕರಣೆ ಹೊರಡಿಸಿದೆ. “ಉದಯೋನ್ಮುಖ ಹಾಗೂ ಪ್ರತಿಭಾವಂತ ಕವಿಗಳಿಂದ ವೀರರಾಣಿ ಕಿತ್ತೂರು ಚನ್ನಮ್ಮ, ಸ್ವಾತಂತ್ರ್ಯ ಹೋರಾಟಗಾರರು, ಕನ್ನಡ ನಾಡು, ನುಡಿ, ಇತಿಹಾಸ, ಸಂಸ್ಕೃತಿ, ಪರಂಪರೆ, ಪರಿಸರ ಪ್ರೇಮ, ರಾಷ್ಟ್ರಪ್ರೇಮ, ಮಾನವೀಯ ಮೌಲ್ಯಗಳು ವಿಷಯಗಳಿಗೆ ಸಂಬಂಧಿಸಿದಂತೆ ಕವನಗಳನ್ನು ಆಹ್ವಾನಿಸಲಾಗಿದೆ” ಎಂದು ಹೇಳಿದೆ.
“ಕವನ ನೋಂದಾಯಿಸಲು ಇಚ್ಚಿಸುವವರು ಕವನವು 30 ಸಾಲುಗಳನ್ನು ಮೀರಿದಂತೆ ಬರೆಯಬೇಕು. ಆ ಕವನವನ್ನು ಕಾಗದದ ಒಂದೇ ಮಗ್ಗುಲಲ್ಲಿ ಬರೆದು ಡಿಟಿಪಿ ಮಾಡಿಸಿ ಸ್ವ-ವಿಳಾಸ, ಕಿರುಪರಿಚಯ, ಭಾವಚಿತ್ರ, ವಾಟ್ಸ್‌ಆ್ಯಪ್ ಮೊಬೈಲ್ ಸಂಖ್ಯೆಯೊಂದಿಗೆ ಸೆ.30ರ ಒಳಗೆ ಕಳುಹಿಸಬೇಕು” ಎಂದು ಹೇಳಿದೆ.
“ಕವನವನ್ನು ಮಂಜುಳಾ ಶೆಟ್ಟರ್, ಗೌರವ ಕಾರ್ಯದರ್ಶಿಗಳು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕೇರ್ ಆಪ್ ರಾಜು ಹಕ್ಕಿ, ಮೆಳೆಪ್ಪನವರ ಚಾಳ, ಬೈಲಹೊಂಗಲ, ಬೆಳಗಾವಿ ಜಿಲ್ಲೆ 591102 – ಈ ವಿಳಾಸಕ್ಕೆ ಕಳಿಸಬೇಕು. ಹೆಚ್ಚಿನ ಮಾಹಿತಿಗೆ ಮೊ.ನಂ. 9945326808, 9844491490 ಸಂಪರ್ಕಿಸಬಹುದು” ಎಂದು ಹೇಳಿದೆ.