ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದ ಮಹಿಳೆಯೋರ್ವರು ‘ಗೃಹ ಲಕ್ಷ್ಮೀ’ ಹಣ ಕೂಡಿಟ್ಟು ತನ್ನ ಮಗನಿಗೆ ಬೈಕ್ ಖರೀದಿಸಲು ಮುಂಗಡ ಹಣ ನೀಡಿದ್ದು, ಈ ಮಹಿಳೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಭಿನಂದನೆ ತಿಳಿಸಿದ್ದಾರೆ.
ಕೌಜಲಗಿ ಗ್ರಾಮದ ಬಾಗವ್ವಾ ನೀಲಪ್ಪ ಸಣ್ಣಕ್ಕಿ ಎಂಬ ಮಹಿಳೆ ರಾಜ್ಯ ಸರ್ಕಾರದ ‘ಗೃಹಲಕ್ಷ್ಮಿ’ ಯೋಜನೆಯ ಹಣ ಕೂಡಿಟ್ಟು, ತನ್ನ ಮಗ ರಮೇಶ್ ಎಂಬುವವರಿಗೆ ದ್ವಿಚಕ್ರ(ಬೈಕ್) ವಾಹನ ಕೊಡಿಸಲು, ಮುಂಗಡ ಹಣ ನೀಡಿದ್ದಾರೆ.
‘ಗೃಹಲಕ್ಷಿ’ ಯೋಜನೆಯ ಹಣ ಲಕ್ಷಾಂತರ ಮಹಿಳೆಯರ ಜೀವನದಲ್ಲಿ ಹೊಸ ಸಂಚಲನ ಮೂಡಿಸಿದ್ದು ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಮಹಾನವಮಿ ಹಬ್ಬದಂದು ಮಗನಿಗೆ ದ್ವಿಚಕ್ರ ವಾಹನ ಖರೀದಿಸಲು ತಾಯಿ ಗೃಹಲಕ್ಷ್ಮೀ ಹಣ ನೀಡಿರುವ ವಿಷಯ ಕೇಳಿ ಖುಷಿಯಾಗಿದೆ. ತಾಯಿ ಮಗನಿಗೆ ಮನಃಪೂರ್ವಕವಾಗಿ ಶುಭ ಕೋರುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಳಗಾವಿ | ಚಳಿಗಾಲ ಅಧಿವೇಶನದ ವೇಳೆಗೆ ರಾಜ್ಯಕ್ಕೆ ಹೊಸ ಸಿಎಂ ಬರಲಿದ್ದಾರೆ: ಬಿ ವೈ ವಿಜಯೇಂದ್ರ
ಶೋರೂಮ್‌ಗೆ ತೆರಳಿರುವ ಬಾಗವ್ವಾ ನೀಲಪ್ಪ ಸಣ್ಣಕ್ಕಿ ಬೈಕ್ ಅನ್ನು ಪಡೆದುಕೊಂಡಿದ್ದು, ಮಗನಿಗೆ ಉಡುಗೊರೆಯಾಗಿ ನೀಡಿದ್ದಾರೆ.

