ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲುಕಿನ ಬೋರಗಾಂವ ಗ್ರಾಮ ಲೆಕ್ಕದಿಕಾರಿ ವಿಠ್ಠಲ ಡವಳೇಶ್ವರ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ಹಿಂದೆ ಚಿಕ್ಕೋಡಿಯಿಂದ ಬಾಗಲಕೋಟೆಗೆ 1.10 ಕೋಟಿ ಹಣ ಅಕ್ರಮವಾಗಿ ಸಾಗಿಸುತ್ತಿದ್ದಾಗ ವಿಠ್ಠಲ ಡವಳೇಶ್ವರ ಸಿಕ್ಕಿಬಿದ್ದಿದ್ದು, ಇವರು ವಾಸವಿದ್ದ ನಿಪ್ಪಾಣಿ ಪಟ್ಟಣದ ಬಾಡಿಗೆ ಮನೆಯಲ್ಲೇ ಸಾಕಷ್ಟು ಪ್ರಮಾಣದ ಹಣ ಪತ್ತೆಯಾಗಿತ್ತು.
ಈ ಕುರಿತು ವಿಠ್ಠಲ ಡವಳೇಶ್ವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪವೂ ಕೇಳಿ ಬಂದಿದ್ದು, ಇದೀಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.